ಮೊಗರ್ಪಣೆಯಲ್ಲಿ ಸರಣಿ ಅಪಘಾತ

0

ಪರಾರಿಯಾಗಲೆತ್ನಿಸಿದ ಕಾರು ಚಾಲಕನನ್ನು ಬೆನ್ನಟ್ಟಿ ಹಿಡಿದ ಕಾರು ಚಾಲಕ

ಮೊಗರ್ಪಣೆ ವೆಂಕಟರಮಣ ಸೊಸೈಟಿ ಬಳಿ ಮೂರು ವಾಹನಕ್ಕೆ ಡಿಕ್ಕಿಗೊಳಿಸಿ ಪರಾರಿ ಯಾಗಲು ಯತ್ನಿಸಿದ ಕಾರು ಚಾಲಕನನ್ನು ಮತ್ತೊಂದು ಕಾರಿನ ಚಾಲಕ ಬೆನ್ನಟ್ಟಿ ಹಿಡಿದ ಘಟನೆ ಇದೀಗ ವರದಿಯಾಗಿದೆ.


ಐವರ್ನಾಡನ ವ್ಯಕ್ತಿ ಸುಳ್ಯ ಕಡೆಯಿಂದ ತನ್ನ ಇಟೋಸ್ ಕಾರಿನಲ್ಲಿ ಪೈಚಾರು ಕಡೆಗೆ ವೇಗವಾಗಿ ಬಂದಿದ್ದು ಇದೇ ರಸ್ತೆಯಲ್ಲಿ ಬರುತ್ತಿದ್ದ ಎರಡು ಕಾರು ಮತ್ತು ಒಂದು ಪಿಕಪ್ ವಾಹನಕ್ಕೆ ಗುದ್ದಿ ವಾಹನ ನಿಲ್ಲಿಸದೆ ಪರಾರಿ ಯಾಗಲು ಯತ್ನಿಸಿದ್ದಾರೆ ಎನ್ನಲಾಗಿದೆ.


ಈತ ಡಿಕ್ಕಿಗೊಳಿಸಿದ ಕಾರುಗಳಲ್ಲಿ ಒಂದು ಕಾರಿನ ಚಾಲಕ ಆತನನ್ನು ಬೆನ್ನಟ್ಟಿದಾಗ ಹಳೆ ಗೇಟು ಪೆಟ್ರೋಲ್ ಬಂಕ್ ಬಳಿ ತಡೆದು ನಿಲ್ಲಿಸಿದ್ದು ಈ ಸಂದರ್ಭದಲ್ಲಿ ಸ್ಥಳೀಯರು ಹಾಗೂ ಈತ ಗುದ್ದಿದ ಮತ್ತೆರಡು ವಾಹನದ ಚಾಲಕರು ಬಂದು ಆತನನ್ನು ತರಾಟೆಗೆತ್ತಿಕೊಂಡರು ಎಂದು ತಿಳಿದುಬಂದಿದೆ.


ಘಟನೆಯ ವಿವರ ತಿಳಿದು ಸ್ಥಳಕ್ಕೆ ಬಂದ ಸುಳ್ಯ ಪೊಲೀಸರು ಆತನನ್ನು ಸುಳ್ಯ ಠಾಣೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

ಘಟನೆಯಿಂದ ಗುದ್ದಿದ ವಾಹನಗಳಿಗೆ ಅಲ್ಪಸ್ವಲ್ಪ ತಾಗಿದ್ದು ಹಾಗೂ ಚಾಲಕರಿಗೆ ಯಾವುದೇ ಹಾನಿ ಸಂಭವಿಸಿಲ್ಲ ಎನ್ನಲಾಗಿದೆ.