ಹಳೆಗೇಟು: ಕಾರು ಮತ್ತು ಸ್ಕೂಟಿ ನಡುವೆ ಅಪಘಾತ, ಸ್ಕೂಟಿ ಸವಾರನಿಗೆ ಗಾಯ

0

ನಡು ರಸ್ತೆಯಲ್ಲಿ ಬಾಕಿಯಾದ ಸ್ಕೂಟಿ, ವಾಹನ ಸವಾರರ ಪರದಾಟ

ಹಳಗೇಟು ಸ್ಕೂಟಿ ಮತ್ತು ಕಾರು ನಡುವೆ ಅಪಘಾತ ಸಂಭವಿಸಿ ಸ್ಕೂಟಿ ಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಮೇ 24ರಂದು ರಾತ್ರಿ ನಡೆದಿದೆ.

ಕಾರಿಗೆ ಡಿಕ್ಕಿಯಾಗಿ ರಸ್ತೆಗೆ ಬಿದ್ದಿದ್ದ ಸ್ಕೂಟಿ ಸುಮಾರು ಅರ್ಧ ಗಂಟೆಗಳ ಕಾಲ ರಸ್ತೆಯ ನಡುವಲ್ಲಿಯೇ ಬಿದ್ದಿದ್ದು ಈ ರಸ್ತೆಯ ಮೂಲಕ ಸಂಚರಿಸುವ ಇತರ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು.
ಪೈಚಾರು ಕಡೆಯಿಂದ ಸುಳ್ಯದತ್ತ ಬರುತ್ತಿದ್ದ ಸ್ಕೂಟಿ ಸುಳ್ಯದಿಂದ ಪೈಚಾರು ಕಡೆ ಹೋಗುತ್ತಿದ್ದ ಕಾರಿನ ನಡುವೆ ಡಿಕ್ಕಿ ಸಂಭವಿಸಿತ್ತು.
ಗಾಯಗೊಂಡು ರಸ್ತೆಗೆ ಬಿದ್ದ ಸವಾರನನ್ನು ಸ್ಥಳಿಯರು ಆಸ್ಪತ್ರೆಗೆ ಕರೆದೋಯಿದ್ದಿದ್ದು,ಭಾರಿ ಮಳೆಯಾಗುತ್ತಿದ್ದ ಕಾರಣ ನಡು ರಸ್ತೆಯಲ್ಲಿ ಬಿದ್ದಿದ್ದ ಸ್ಕೂಟಿ ಕೆಲ ಕಾಲ ಇತರ ವಾಹನ ಸವಾರರಿಗೆ ಕಿರಿಕಿರಿ ಉಂಟುಮಾಡಿತು.