ಸಂಪುಟ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠದಲ್ಲಿ ನರಸಿಂಹ ಜಯಂತಿ ಕಾರ್ಯಕ್ರಮ, ದೇವರ ಅವಭೃತೋತ್ಸವ

0

ಸಂಪುಟ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠದಲ್ಲಿ ಶ್ರೀ ನರಸಿಂಹ ಜಯಂತಿ ಮಹೋತ್ಸವದ ಅಂಗವಾಗಿ ಕುಮಾರಧಾರ ನದಿಯಲ್ಲಿ ಅಗ್ರಹಾರದ ಪಂಚಮಿ ತೀರ್ಥದಲ್ಲಿ ಶ್ರೀ ದೇವರ ಅವಭೃತೋತ್ಸವ ಮೇ.23 ರಂದು ನಡೆಯಿತು.

ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿಗಳು ಅವಭೃತದ ವಿದಿವಿಧಾನಗಳನ್ನು ನೆರವೇರಿಸಿದರು. ಪ್ರಧಾನ ಅರ್ಚಕ ಶ್ರೀಕರ ಉಪಾಧ್ಯಾಯ ಉತ್ಸವದ ವೈದಿಕ ವಿಧಾನ ನೆರವೇರಿಸಿದರು.
ಪ್ರಾತಃಕಾಲ ಶ್ರೀ ನರಸಿಂಹ ದೇವರಿಗೆ ಕಟ್ಟೆಪೂಜೆ ನಡೆಯಿತು. ನಂತರ ಓಕುಳಿ ಪೂಜೆ ಹಾಗೂ ಓಕುಳಿ ಸಂಪ್ರೋಕ್ಷಣೆ ನೆರವೇರಿತು.

ಬಳಿಕ ಶ್ರೀ ದೇವರು ಬಂಡಿ ರಥದಲ್ಲಿ ದೇವಳದಿಂದ ಅಗ್ರಹಾರ ಸೋಮನಾಥ ದೇವಾಲಯದ ಸಮೀಪದ ಕುಮಾರಧಾರ ನದಿ ತಟದವರೆಗೆ ಸಾಗಿಬಂದರು. ಅಗ್ರಹಾರದ ಪುಣ್ಯತೀರ್ಥದಲ್ಲಿ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಶ್ರೀ ದೇವರಿಗೆ ಜಲಾಭಿಷೇಕ ಮತ್ತು ಶಂಖಾಭಿಷೇಕ ನೆರವೇರಿಸಿದರು. ನಂತರ ದೇವರ ಅವಭೃತ ಸ್ನಾನ ನೆರವೇರಿತು. ಬಳಿಕ ಕಟ್ಟೆಯಲ್ಲಿ ಶ್ರೀ ದೇವರಿಗೆ ಕಟ್ಟೆಪೂಜೆ ನೆರವೇರಿತು. ಅವಭೃತ ಮುಗಿಸಿ ಶ್ರೀ ಮಠಕ್ಕೆ ಆಗಮಿಸಿದ ನರಸಿಂಹ ದೇವರಿಗೆ ಮಠದಲ್ಲಿ ವಸಂತಪೂಜೆ ನೆರವೇರಿತು.