ಎಸ್ಸೆಸ್ಸೆಫ್ ಕಲ್ಲುಗುಂಡಿ ಶಾಖೆ ವತಿಯಿಂದ ಸಮ್ಮರ್ ಕ್ಯಾಂಪ್ ಮತ್ತು ಪ್ರತಿಭಾ ಪುರಸ್ಕಾರ

0

ಮಕ್ಕಳಲ್ಲಿ ಕಲೆ, ಸಾಹಿತ್ಯ ಮತ್ತು ಕೌಶಲ್ಯಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಜಾದಿನಗಳನ್ನು ಸದ್ಬಳಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸುವ ಸಲುವಾಗಿ ಎಸೆಸ್ಸೆಫ್ ಕಲ್ಲುಗುಂಡಿ ಶಾಖೆಯ ವತಿಯಿಂದ ಸಮ್ಮರ್ ಕ್ಯಾಂಪ್ ಮತ್ತು ಪ್ರತಿಭಾ ಪುರಸ್ಕಾರ ಮೇ 25 ರಂದು ಕಲ್ಲುಗುಂಡಿ ಸುನ್ನೀ ಸೆಂಟರ್ ನಲ್ಲಿ ನಡೆಯಿತು.

ಶಾಖಾ ವ್ಯಾಪ್ತಿಯಲ್ಲಿ ಉತ್ತಮ ಅಂಕ ಗಳಿಸಿದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯಾದ ಅಜ್ಮಲ್ ಸಿನಾನ್ (564), ಪಿಯುಸಿ ವಿದ್ಯಾರ್ಥಿಗಳಾದ ನಿಶಾದ್ (574), ಖದೀಜತ್ ರಂಝೀನಾ(560), ಅನುಷ್(542), ಅಫೀದಾ ಫಾತಿಮಾ (527), ಅಜ್ಮಲ್ (524), ಅಜ್ನಾಸ್ (513), ಶಿಫಾನ (510) ಮತ್ತು ತಸ್ನೀಮಾ(504) ಎಂಬವರಿಗೆ ಅವರ ಸಾಧನೆಯನ್ನು ಗುರುತಿಸಿ ಸನ್ಮಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಶಾಖಾಧ್ಯಕ್ಷರಾದ ಆಶಿಕ್ ಕೆ ಹೆಚ್ ರವರ ಅಧ್ಯಕ್ಷತೆಯಲ್ಲಿ ಅತಿಥಿಗಳಾಗಿ ಎಸ್. ವೈ. ಎಸ್ ನಾಯಕರಾದ ಸಿದ್ದೀಕ್ ಕಟ್ಟೆಕಾರ್, ಸುಳ್ಯ ಸೆಕ್ಟರ್ ಮಾಜಿ ಅಧ್ಯಕ್ಷರಾದ ಜಾಬಿರ್ ಗೂನಡ್ಕ ಹಾಗೂ ಎಸ್. ವೈ. ಎಸ್. ಕಲ್ಲುಗುಂಡಿ ಪ್ರಧಾನ ಕಾರ್ಯದರ್ಶಿ ಫೈಝಲ್ ಝುಹ್ರಿ ಭಾಗವಹಿಸಿದರು. ಹಾಗೂ ಕಲ್ಲುಗುಂಡಿ, ಸಂಪಾಜೆ ಮತ್ತು ಕೊಯನಾಡಿನಿಂದ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿ, ಪ್ರಯೋಜನ ಪಡೆದುಕೊಂಡರು.

ಶಾಖಾ ಪ್ರಧಾನ ಕಾರ್ಯದರ್ಶಿ ರುನೈಝ್ ಸ್ವಾಗತಿಸಿ, ಸ್ವಾದಿಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.