ಸುಳ್ಯದ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿನಿ ಇಷಾ ಯು.ಯಂ.ಗೆ ಎಸ್. ಎಸ್. ಎಲ್ .ಸಿ ಮರು ಮೌಲ್ಯಮಾಪನದಲ್ಲಿ 3 ಹೆಚ್ಚುವರಿ ಅಂಕ

0

ಎಸ್. ಎಸ್. ಎಲ್ .ಸಿ ಫಲಿತಾಂಶ ಮೇ.9ರಂದು ಪ್ರಕಟಗೊಂಡಿದ್ದು, ಸುಳ್ಯದ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ವಿದ್ಯಾರ್ಥಿನಿ ಇಷಾ ಯು.ಯಂ ಮರು ಎಣಿಕೆಯ ನಂತರದ ಫಲಿತಾಂಶದ ಬದಲಾಗಿ 596ರ ಬದಲಾಗಿ 599 ಅಂಕ ಪಡೆದುಕೊಂಡಿದ್ದಾರೆ .ಪ್ರಥಮ ಫಲಿತಾಂಶದಲ್ಲಿ ವಿಜ್ಞಾನದ ಮೌಲ್ಯಮಾಪನದ ಎಡವಟ್ಟಿನಿಂದಾಗಿ ವಿದ್ಯಾರ್ಥಿನಿಯು 3 ಅಂಕಗಳನ್ನು ಕಳೆದುಕೊಂಡು ಮರುಮೌಲ್ಯಮಾಪನದಲ್ಲಿ 3 ಅಂಕಗಳನ್ನು ಗಳಿಸಿಕೊಂಡಿದ್ದಾಳೆ. ಈಕೆಯು ಸಿ.ಐ.ಎಸ್.ಎಫ್- ಹೈದರಾಬಾದ್ ನ ಉದ್ಯೋಗಿಯಾಗಿರುವ ರವೀಂದ್ರಕುಮಾರ್. ಯು.ಯಂ ಹಾಗೂ ಸೈಂಟ್ ಜೋಸೆಫ್ ಪ್ರೌಢ ಶಾಲಾ ಶಿಕ್ಷಕಿ ದೇವಿಲತಾ ಕೆ ದಂಪತಿಗಳ ಪುತ್ರಿ.