ಸುಳ್ಯ ತಾಲೂಕು ಪಿಗ್ಮಿ ಸಂಗ್ರಾಹಕರ ಸಂಘದ ಮಾಸಿಕ ಸಭೆ

0

ಸುಳ್ಯ ತಾಲೂಕು ಪಿಗ್ಮಿ ಸಂಗ್ರಾಹಕರ ಸಂಘ ಸುಳ್ಯ ಇದರ ಮಾಸಿಕ ಸಭೆಯು ಜೂ.10ರಂದು ಸಂಘದ ಕೊಠಡಿಯಲ್ಲಿ ಅಧ್ಯಕ್ಷರಾದ ಯo ಹರಿಶ್ಚಂದ್ರ ಇವರ ಅಧ್ಯಕ್ಷತೆಯಲ್ಲಿ ಜರುಗಿತು. ಈ ಸಭೆಯಲ್ಲಿ ಇತ್ತೀಚೆಗೆ ಅಪಘಾತದಲ್ಲಿ ಗಾಯಗೊಂಡು ಚೇತರಿಸಿಕೊಳ್ಳುತ್ತಿರುವ, ದೀಕ್ಷಿತ್ ರಾವ್ ಆದರ್ಶ.ಕೋ. ಅಪರೇಟಿವ್ ಸೊಸೈಟಿ ಸುಳ್ಯ ಇವರಿಗೆ ಸಂಘದ ಸಭೆಯಲ್ಲಿ ರೂ.10,000 ಧನ ಸಹಾಯ ನೀಡಲಾಯಿತು. ಈ ಸಭೆಯಲ್ಲಿ ಕಾರ್ಯದರ್ಶಿ ಸುನಿಲ್, ಖಜಾಂಜಿ ಪುಷ್ಪಾದರ, ಹಾಗೂ ರಾಧಾಕೃಷ್ಣ, ಮಹಾಬಲ ರೈ, ಶ್ರೀ ಮತಿ ಆರತಿ, ಜಯಂತಿ, ಲತಾಶ್ರೀ ಅವರು ಉಪಸ್ಥಿತರಿದ್ದರು.