ಎಡಮಂಗಲದಲ್ಲಿ ರಬ್ಬರ್ ಟ್ಯಾಪರ್ ಆತ್ಮಹತ್ಯೆ

0

ಎಡಮಂಗಲ ಗ್ರಾಮದ ಏನಡ್ಕ ಮಾಧವ ಗೌಡ ಎಂಬವರ ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದ ಕೇರಳದ ಪಾಲಕ್ಕಾಡ್ ನಿವಾಸಿ ಜೇಮ್ಸ್ ಎಂಬವರು ರಬ್ಬರ್ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಯಾವಾಗ ಆತ್ಮಹತ್ಯೆ ಮಾಡಿಕೊಂಡದ್ದೆಂದು ಗೊತ್ತಾಗಿಲ್ಲ. ಕೊಳೆತು ವಾಸನೆ ಬರತೊಡಗಿದುದರಿಂದ ಆತ್ಮಹತ್ಯೆ ವಿಚಾರ ತಿಳಿಯಿತು. ಬೆಳ್ಳಾರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.