ಸುಳ್ಯದ ರಥಬೀದಿ ಜಂಕ್ಷನ್ ಬಳಿ ಕಾರು ಮತ್ತು ಬೈಕ್ ನಡುವೆ ಅಪಘಾತ

0

ಸವಾರ ಅಪಾಯದಿಂದ ಪಾರು, ವಾಹನಗಳು ಜಖಂ

ಸುಳ್ಯ ರಥಬೀದಿ ಜಂಕ್ಷನ್ ಪೊಲೀಸ್ ಠಾಣೆಯ ಬಳಿ ಕಾರು ಮತ್ತು ಬೈಕ್ ನಡುವೆ ಮುಖಮುಖಿ ಡಿಕ್ಕಿ ಸಂಭವಿಸಿ ಅದೃಷ್ಟವಶಾತ್ ಬೈಕ್ ಸವಾರ ಸಣ್ಣ ಪುಟ್ಟ ಗಾಯದಿಂದ ಪಾರಾಗಿದ್ದು ವಾಹನಗಳು ಜಖಂಗೊಂಡ ಘಟನೆ ಇಂದು ಸಂಭವಿಸಿದೆ.


ಮಡಿಕೇರಿ ಕಡೆಯಿಂದ ಬರುತ್ತಿದ್ದ ಕಾರಿಗೆ ಹಳೆಗೇಟು ಕಡೆಯಿಂದ ಬರುತ್ತಿದ್ದ ಬೈಕ್ ಮುಖಮುಖಿ ಡಿಕ್ಕಿ ಸಂಭವಿಸಿ ಅಪಘಾತದಲ್ಲಿ ಬೈಕ್ ಸವಾರ ಅಡ್ಕಾರು ನಿವಾಸಿ ಸಣ್ಣ ಪುಟ್ಟ ಗಾಯದಿಂದ ಪಾರಾಗಿದ್ದಾರೆ.
ಘಟನೆಗೆ ಕಟ್ಟೆಕ್ಕಾರ್ ಅಂಗಡಿ ಮುಂಭಾಗದಲ್ಲಿರುವ ಹೆದ್ದಾರಿಯಲ್ಲಿ ನೀರಿನ ಪೈಪ್ ದುರಸ್ತಿಗೆ ತೋಡಿದ ಗುಂಡಿಯನ್ನು ಸರಿಯಾಗಿ ಮುಚ್ಚದ ಕಾರಣ ಉಂಟಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಈ ಭಾಗದ ರಸ್ತೆಯಲ್ಲಿರುವ ಅವಜ್ಞಾನಿಕ ಸ್ಥಿತಿಯ ಕುರಿತು ಸುದ್ದಿ ಪತ್ರಿಕೆ ಮತ್ತು ವೆಬ್ಸೈಟ್ ವರದಿಗಳಲ್ಲಿ ಅಧಿಕಾರಿಗಳನ್ನು ಎಚ್ಚರಿಸುವ ಕಾರ್ಯ ಕೂಡ ನಡೆದಿತ್ತು. ಆದರೆ ಇದುವರೆಗೆ ಸಂಬಂಧಪಟ್ಟ ಅಧಿಕಾರಿಗಳ ಸ್ಪಂದನೆ ಸಿಗಲಿಲ್ಲ. ಇನ್ನೂ ಹೆಚ್ಚಿನ ಅಪಘಾತ ಸಂಭವಿಸಿ ಸಾವು ನೋವು ಸಂಭವಿಸುವ ಮುನ್ನ ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.