ಶ್ರೀಮತಿ ದೇವಿ ಬಾಲನ್ ಸಂಪಾಜೆ ಅಸೌಖ್ಯದಿಂದ ನಿಧನ

0

ದ.ಕ. ಸಂಪಾಜೆ ಗ್ರಾಮದ ಉದ್ಯಮಿ ವಿ.ವಿ. ಬಾಲನ್ ಅವರ ಧರ್ಮಪತ್ನಿ ಶ್ರೀಮತಿ ದೇವಿ ಬಾಲನ್ ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಜೂ.13ರಂದು ಸಂಜೆ ಕೇರಳದ ಕಣ್ಣೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 69 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ಪ್ರಶಾಂತ್, ಪ್ರಶೀತ್, ಓರ್ವ ಪುತ್ರಿ ಪ್ರಶೀತ, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.