ಕೆವಿಜಿ ಅಮರ ಜ್ಯೋತಿ ಪಿಯು ಕಾಲೇಜಿನ ವಿದ್ಯಾರ್ಥಿಗಳಿಗೆ ಸಂಭ್ರಮದ ನಿಸರ್ಗೋತ್ಸವ

0


ಕೆವಿಜಿ ಅಮರ ಜ್ಯೋತಿ ಪಿಯು ಕಾಲೇಜಿನ ವಿದ್ಯಾರ್ಥಿಗಳಿಗೆ ಜಾನಪದ ಸೊಗಡನ್ನು ಉಣ ಬಡಿಸುವ ಉದ್ದೇಶದಿಂದ ಅರಂಬೂರಿನಲ್ಲಿ ಕೆಸರುಗದ್ದೆ ಆಟೋಟಗಳನ್ನುಆಯೋಜಿಸಿತು. ಕಾಲೇಜಿನ ಉಪನ್ಯಾಸಕರಾದ ದೀಕ್ಷಿತ್ ರವರು ಸ್ವಾಗತಿಸಿದರು. ಮಾಜಿ ನಗರ ಪಂಚಾಯತ್ ನ ಅಧ್ಯಕ್ಷರಾದ ಎನ್ ಎ ರಾಮಚಂದ್ರ ರವರು ಸಾಂಪ್ರದಾಯಿಕ ರೀತಿಯಲ್ಲಿ ಚಾಲನೆನೀಡಿ, ಶಿಕ್ಷಣದ ಜೊತೆಗೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕ್ಕೊಳ್ಳುವುದರ ಜೊತೆಗೆ ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸುವಂತೆ ಎಲ್ಲಾ ವಿದ್ಯಾರ್ಥಿಗಳಿಗೆ ಕರೆಕೊಟ್ಟರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡ ನಮ್ಮ ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಜ್ವಲ್ ಯು ಜೆ ಅವರು ಶುಭ ಹಾರೈಸಿ ಗ್ರಾಮೀಣ ಕ್ರೀಡೆಗಳು ಬದುಕಿನಲ್ಲಿ ಯಾವ ರೀತಿಯ ಪಾತ್ರವನ್ನು ವಹಿಸುತ್ತವೆ ಎನ್ನುವುದನ್ನು ತಿಳಿಸಿದರು.

ನಿವೃತ್ತ ಸೈನಿಕರಾರು ಹಾಗೂ ಪೋಷಕರಾದ ಶ್ರೀ ಮೋಹನ್ ಲಾಲ್ ಪಡ್ಪು ರವರು ಮತ್ತು ಅವರ ಸಹೋದರ ಹರೀಶ್ ಪಿ ಎಲ್ ಕಾರ್ಯಕ್ರಮಕ್ಕೆ ಪೂರ್ಣ ಪ್ರಮಾಣದ ಸಹಕಾರವನ್ನು ನೀಡುವುದರ ಜೊತೆಗೆ ಕಾರ್ಯಕ್ರಮ ಸುವ್ಯವಸ್ಥಿತವಾಗಿ ನಡೆಯುವುದಕ್ಕೆ ಹಲವು ವ್ಯವಸ್ಥೆಗಳನ್ನು ಮಾಡಿಕೊಟ್ಟು ಸಹಕರಿಸಿದರು. ಪ್ರಕೃತಿಯ ಮಡಿಲಲ್ಲಿ ಸಂಸ್ಥೆಯು ಆಯೋಜಿಸಿದ ಹಗ್ಗ ಜಗ್ಗಾಟ ,ಫುಟ್ಬಾಲ್, ತ್ರೋಬಾಲ್, ಡಾರ್ಜ್ ಬಾಲ್ ಜೊತೆಗೆ ಹಲವು ಸಾಂಪ್ರದಾಯಿಕ ಆಟಗಳ ಸ್ಪರ್ಧೆಯಿಂದ
ವಿದ್ಯಾರ್ಥಿಗಳಲ್ಲಿ ಸಂತಸವು ಮನೆ ಮಾಡಿತು. ಕಾರ್ಯಕ್ರಮವನ್ನು ಶ್ರೀ ರಾಜೇಶ್ ಅವರು ವಂದಿಸಿದರು. ಹಾಗೂ ಮಲ್ಲಿಕಾ ಎಂ ಎಲ್ ನಿರೂಪಿಸಿದರು.ಕಾರ್ಯಕ್ರಮಕ್ಕೆ
ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿ ಡಾ. ರೇಣುಕಾ ಪ್ರಸಾದ್ ಕೆ ವಿ,ಟ್ರಸ್ಟಿ ಡಾ. ಜ್ಯೋತಿ ಆರ್ ಪ್ರಸಾದ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ. ಯಶೋದಾ ರಾಮಚಂದ್ರ,ಸ್ಥಳೀಯರಾದ ಶ್ರೀ ಕುಶಾಲಪ್ಪ ಹಾಗೂ ಡೆಂಟಲ್ ಕಾಲೇಜಿನ ಕಚೇರಿ ಅಧಿಕ್ಷಕರಾದ ಶ್ರೀ ಮಾಧವ ಬಿ ಟಿ,ಎಲ್ಲಾ ವಿದ್ಯಾರ್ಥಿಗಳು ಹಾಗೂ ಭೋದಕ ಭೋದಕೇತರ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.