ಪಂಜ: ಪುತ್ಯ-ಸಂಪಬೈಲು ಕಾಲುಸಂಕ ಉದ್ಘಾಟನೆ

0

ಪಂಜ ಗ್ರಾಮ ಪಂಚಾಯತ್ ನ ಕೂತ್ಕುಂಜ ಗ್ರಾಮದ ಪುತ್ಯ-ಸಂಪ ಬೈಲನಲ್ಲಿ ದೇವಳಕ್ಕೆ ಸಂಪರ್ಕಿಸುವ ರಸ್ತೆಗೆ ಮಾಜಿ ಶಾಸಕ ಸಚಿವ ಎಸ್ ಅಂಗಾರ ರವರ ರೂ 35 ಲಕ್ಷ ಅನುದಾನದಲ್ಲಿ 5 ಕಾಲುಸಂಕ ನಿರ್ಮಾಣ ಗೊಂಡಿದ್ದು ಅದರ ಉದ್ಘಾಟನೆ ಕಾರ್ಯಕ್ರಮ ಜೂ.15 ರಂದು ನಡೆಯಿತು.

ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮೀ ಜಳಕದಹೊಳೆ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಾರಾಯಣ ಕೃಷ್ಣನಗರ, ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ಪೈ, ನಿರ್ದೇಶಕರಾದ ಚಂದ್ರಶೇಖರ ಶಾಸ್ತ್ರಿ,ಲಿಗೋಧರ ಆಚಾರ್ಯ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಶ್ರೀಮತಿ ಸುವರ್ಣಿನಿ ಎನ್ ಎಸ್, ಶಿವರಾಮಯ್ಯ ಕರ್ಮಜೆ, ತಿಮ್ಮಪ್ಪ ಗೌಡ ಪುತ್ಯ, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಪ್ರಮೀಳಾ ಸಂಪ, ಜಗದೀಶ್ ಪುರಿಯ, ಶರತ್ ಕುದ್ವ, ಚಂದ್ರಶೇಖರ ದೇರಾಜೆ , ಶ್ರೀಮತಿ ವೀಣಾ, ಶ್ರೀಮತಿ ನೇತ್ರಾವತಿ ಕಲ್ಲಾಜೆ, ಮಾಜಿ ಸದಸ್ಯರಾದ ಲೋಕೇಶ್ ಬರೆಮೇಲು, ಶ್ರೀಮತಿ ಚಂದ್ರಾವತಿ ಸಂಪ ಮೊದಲಾದವರು.

ಕಾರ್ಯಕ್ರಮದಲ್ಲಿ ಚಂದ್ರಶೇಖರ ಶಾಸ್ತ್ರಿ ಪ್ರಾಸ್ತಾವಿಕ ಮಾತನಾಡಿದರು. ಶರತ್ ಕುದ್ವ ಸ್ವಾಗತಿಸಿದರು. ನಾರಾಯಣ ಕೃಷ್ಣನಗರ ವಂದಿಸಿದರು.