ಕು. ಚೈತ್ರ ಕೆ. ಕೆಸೆಟ್ ಪರೀಕ್ಷೆಯಲ್ಲಿ ಉತ್ತೀರ್ಣ

0

ಬೆಳ್ಳಾರೆಯ ಪೆರುವಾಜೆ ಡಾ. ಕೆ. ಶಿವರಾಮ ಕಾರಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾಾತಕೋತ್ತರ ಅಧ್ಯಯನ ಕೇಂದ್ರದ ವಿದ್ಯಾಾರ್ಥಿನಿ ಕು.ಚೈತ್ರ.ಕೆ. ಅವರು ಕೆಸೆಟ್ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ.

ಕು.ಚೈತ್ರ ಕೆ. ಅವರು ಇತ್ತೀಚೆಗೆ ನಡೆದ ಉಪನ್ಯಾಸಕರ ಹುದ್ದೆಗೆ ಯು.ಜಿ.ಸಿ. ನಿಗದಿಪಡಿಸಿರುವ ಅರ್ಹತಾ ಪರೀಕ್ಷೆ ಕೆಸೆಟ್ ನಲ್ಲಿ ಉತ್ತೀರ್ಣಗೊಂಡಿದ್ದಾರೆ.
ಈಕೆ ಬೆಳ್ಳಾರೆ ಗ್ರಾಮದ ಕಾವಿನಮೂಲೆಯ ರಾಜರಾಮ.ಕೆ. ಮತ್ತು ಶ್ರೀಮತಿ ಪ್ರವೀಣ ಸರಸ್ವತಿಯವರ ಪುತ್ರಿಯಾಗಿದ್ದು, ಡಾ. ಕೆ. ಶಿವರಾಮ ಕಾರಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದ್ವಿತೀಯ ಎಂ.ಕಾಂ. ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.