ಸಂಪಾಜೆ ಸಸ್ಯಕ್ಷೇತ್ರದಲ್ಲಿ ರಿಯಾಯಿತಿ ದರದಲ್ಲಿ ವಿವಿಧ ಜಾತಿಯ ಸಸಿಗಳು ಲಭ್ಯ

0

ಮಡಿಕೇರಿ ವಿಭಾಗದ ಸಂಪಾಜೆ ವಲಯದ ಸಂಪಾಜೆ ಸಸ್ಯಕ್ಷೇತ್ರದಲ್ಲಿ ವಿವಿಧ ಜಾತಿಯ ಸಸಿಗಳು ರಿಯಾಯಿತಿ ದರದಲ್ಲಿ ಲಭ್ಯವಿರುವುದಾಗಿ ವಲಯ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

ರೈತರಿಗೆ 2024-25ನೇ ಸಾಲಿನಲ್ಲಿ ದಾಲ್ಚಿನ್ನಿ, ಮಹಾಗನಿ, ನೇರಳೆ, ಪೇರಳೆ, ಪುನರ್ಪುಳಿ, ರಕ್ತಚಂದನ ಹಾಗೂ ತೇಗದ ಸಸಿಗಳು 6+9ರ ಬ್ಯಾಗ್ ಸೈಜ್ ನಲ್ಲಿ ಮೂರು ರೂಗಳಿಗೆ ಲಭ್ಯವಿದ್ದು, ಹೆಬ್ಬಲಸು, ಹಿಪ್ಪೆ, ಹೊಂಗೆ, ಮಹಾಗನಿ, ಪುನರ್ಪುಳಿ, ರಾಂಪತ್ರೆ, ರಂಜಲು ಮತ್ತಿತರ ಸಸಿಗಳು 8+12ರ ಬ್ಯಾಗ್ ಸೈಜ್ ನಲ್ಲಿ ಆರು ರೂ.ಗೆ ಲಭ್ಯವಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.