ವಿಭಾಶ್ರೀ ಎಂ.ಎಸ್. ಕನಕ ಪುರಸ್ಕಾರಕ್ಕೆ ಆಯ್ಕೆ

0

ಮಂಗಳೂರು ವಿಶ್ವವಿದ್ಯಾಲಯದ ಕನಕದಾಸ ಸಂಶೋಧನ ಕೇಂದ್ರದ ವತಿಯಿಂದ ನಡೆಸಲ್ಪಡುವ ‘ಕನಕ ಕೀರ್ತನ ಗಂಗೋತ್ರಿ’ ಕನಕದಾಸರ ಕೀರ್ತನೆಗಳ ಗಾಯನ ಕಾರ್ಯಕ್ರಮದಲ್ಲಿ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ & ಟೆಕ್ನಾಲಜಿ ಪುತ್ತೂರು ಇಲ್ಲಿಯ ಪ್ರಥಮ ಎಂ. ಸಿ.ಎ ವಿದ್ಯಾರ್ಥಿನಿ ವಿಭಾಶ್ರೀ ಎಂ.ಎಸ್ ಸ್ನಾತಕೋತ್ತರ ವಿಭಾಗದಿಂದ 2023-24ನೇ ಸಾಲಿನ ಕನಕ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಸತತ 3 ವರ್ಷಗಳಿಂದ ಈ ಪುರಸ್ಕಾರ ಪಡೆಯುತ್ತಿರುವ ಇವರು ಖ್ಯಾತ ಹಿನ್ನೆಲೆ ಗಾಯಕ ಶ್ರೀ ಅಜಯ್ ವಾರಿಯರ್, ಬೆಂಗಳೂರು ಇವರ ಶಿಷ್ಯೆ. ಶ್ರೀ ಲ್ಯಾಬೊರೇಟರಿ ಬೆಳ್ಳಾರೆಯ ಸುರೇಶ್ – ಅನುಪಮಾ ದಂಪತಿಗಳ ಪುತ್ರಿ.