ದೇವಚಳ್ಳ ಶಾಲೆಯಲ್ಲಿ ನೂತನ ಮಂತ್ರಿ ಮಂಡಲ ರಚನೆ

0

ಸ ಹಿ ಪ್ರಾ ಶಾಲೆ ದೇವಚಳ್ಳದಲ್ಲಿ 2024-25 ಸಾಲಿನ ಹಿರಿಯ ಪ್ರಾಥಮಿಕ ವಿದ್ಯಾರ್ಥಿ ಸಂಸತ್ತಿಗೆ ಚುನಾವಣೆಯ ಮಾದರಿಯಲ್ಲಿ ಜೂ.11ರಂದು ಮತದಾನ ನಡೆಯಿತು. ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ ನಂತರ ಚುನಾವಣೆಯ ಪ್ರಚಾರಕ್ಕೆ ಅವಕಾಶ ನೀಡಲಾಗಿತ್ತು. ಮಕ್ಕಳು ತಮ್ಮ ಕೈ ಬೆರಳುಗಳಿಗೆ ಶಾಹಿ ಹಾಕಿಸಿಕೊಂಡು, ಮತಪತ್ರದಲ್ಲಿನ ತಮ್ಮ ನೆಚ್ಚಿನ ಅಭ್ಯರ್ಥಿಗೆ ಮತ ಚಲಾಯಿಸಿ ಸಂಭ್ರಮ ಪಟ್ಟರು. ಮತದಾರರಿಗೆ ಗುರುತಿನ ಚೀಟಿ ಕಡ್ಡಾಯ ಮಾಡಲಾಗಿತ್ತು. ಬಳಿಕ ಮತ ಎಣಿಕೆ ಕಾರ್ಯವನ್ನು ನಡೆಸಿ ವಿಜೇತರನ್ನು ಘೋಷಿಸಲಾಯಿತು.

ನೂತನ ಮಂತ್ರಿ ಮಂಡಲ ರಚನೆ : ಏಳನೇ ತರಗತಿಯ ಜ್ಞಾನಶ್ರೀ ಬಿ.ಕೆ ಶಾಲಾ ಮುಖ್ಯಮಂತ್ರಿಯಾಗಿ(ನಾಯಕಿ) ಹಾಗೂ 7ನೇ ತರಗತಿಯ ಮೊಹಮ್ಮದ್ ಸಿಮಾಕ್ ಉಪಮುಖ್ಯಮಂತ್ರಿಯಾಗಿ(ಉಪನಾಯಕ)ಆಯ್ಕೆಯಾದರು.


ಬಳಿಕ ಶಾಲೆಯ ಮುಖ್ಯೋಪಾಧ್ಯಾಯ ಶ್ರೀಧರ ಗೌಡ ರವರು ಶಾಲಾ ಮುಖ್ಯ ಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಶಾಲಾ ಸಚಿವ ಸಂಪುಟದವರಿಗೆ ಪ್ರಮಾಣ ವಚನ ಬೋಧಿಸಿದರು. ಚುನಾವಣಾ ಪ್ರಕ್ರಿಯೆಯು ಶಾಲಾ ಮುಖ್ಯೋಪಾಧ್ಯಾಯರ ಮಾರ್ಗದರ್ಶನದಲ್ಲಿ ನಡೆಯಿತು. ಶಾಲಾ ಶಿಕ್ಷಕ ವರ್ಗದವರು ಚುನಾವಣಾ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು.