ಅಲೆಟ್ಟಿ ಗ್ರಾಮ ಕಾಂಗ್ರೆಸ್ ಸಮಿತಿ ವತಿಯಿಂದ ಮಾಧವ ಗೌಡ ಕಲ್ಲೆಂಬಿಯವರಿಗೆ ಶ್ರದ್ಧಾಂಜಲಿ ಸಭೆ

0

ಆಲೆಟ್ಟಿ ಗ್ರಾಮ ಕಾಂಗ್ರೆಸ್ ಸಮಿತಿ ವತಿಯಿಂದ, ಕಾಂಗ್ರೆಸ್ ಪಕ್ಷದ ನಾಯಕರಾದ ಹಾಗೂ ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಮಾಧವ ಗೌಡ ಕಲ್ಲೆಂಬಿ ಇವರು ನಿಧನರಾಗಿದ್ದು, ಮೃತರ ಗೌರವಾರ್ಥ ಶ್ರದ್ಧಾಂಜಲಿ ಸಭೆಯನ್ನು ಸುಳ್ಯದ ಬ್ಲಾಕ್ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಮಾಡಲಾಯಿತು. ಶ್ರದ್ಧಾಂಜಲಿ ಸಭೆಯಲ್ಲಿ ಮೃತರ ಗೌರವಾರ್ಥ ಕೆಪಿಸಿಸಿ ನಾಯಕರಾದ ಟಿ ಎಮ್ ಶಹಿದ್, ಹಿರಿಯ ಕಾಂಗ್ರೆಸ್ ನಾಯಕರಾದ ದೇವಪ್ಪ ನಾಯ್ಕ ಬಡ್ಡಡ್ಕ, ಮಾಜಿ ಗ್ರಾಮ್ ಪಂಚಾಯತ್ ಅಧ್ಯಕ್ಷರಾದ ರಾಧಾಕೃಷ್ಣ ಪರಿವಾರಕಾನ, ಆಲೆಟ್ಟಿ ಗ್ರಾಮ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಸತ್ಯಕುಮಾರ ಆಡಿ0ಜ, ಗ್ರಾಮ ಪಂಚಾಯತ್ ಸದಸ್ಯರಾದ ಚಂದ್ರಕಾಂತ ನಾರ್ಕೋಡ್ ತಮ್ಮ ನುಡಿ ನಮನಮನ ಅರ್ಪಿಸಿದರು. ಮೃತರ ಗೌರವಾರ್ಥ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಮಾಡಿದ ತರುವಾಯ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಧರ್ಮಪಾಲ ಕೊಯಂಗಾಜೆ, ಮೀನಾಕ್ಷಿ ಕುಡೇಕಲ್ಲು, ನಗರ ಪಂಚಾಯತ್ ಸದಸ್ಯರಾದ ಶರೀಫ್ ಕಂಠಿ, ಬಾಪು ಸಾಹೇಬ್ ಅರಂಬೂರು, ಮೃತರ ಸಹೋದರ ಸತೀಶ್ಚಂದ್ರ ಕಲ್ಲೆಂಬಿ, ಮಾಜಿ ಗ್ರಾಮ್ ಪಂಚಾಯತ್ ಸದಸ್ಯರಾದ ಯೂಸುಫ್ ಅಂಜಿಕ್ಕಾರು, ವಕೀಲರಾದ ಚರಣ್ ಕಾಯರ, ಶೇಷಶಯನ ಅರಂತೋಡು, ಚಿತ್ರವೇಲು ನಾಗ ಪಟ್ಟಣ, ಆನಂದ ನಾಗಪಟ್ಟಣ, ಕೇಶವ ಮೊರಂಗಲ್ಲು, ಗಂಗಾಧರ ಮೇನಾಲ ಮೊದಲಾದವರು ಉಪಸ್ಥಿತರಿದ್ದರು.