ಸುದ್ದಿ ವರದಿಗೆ ಸ್ಪಂದನೆ: ಅಪಘಾತದಿಂದ ಗಾಯಗೊಂಡಿದ್ದ ಕೂಲಿ ಕಾರ್ಮಿಕನಿಗೆ ಆರ್ಥಿಕ ಧನ ಸಹಾಯ

0

ಬಕ್ರೀದ್ ಹಬ್ಬದ ಅಂಗವಾಗಿ ಕುಟುಂಬದ ಸದಸ್ಯರಿಗೆ ಆಹಾರ ಸಾಮಗ್ರಿಗಳು ಮತ್ತು ಬಟ್ಟೆ ವಿತರಣೆ

ಗುರುಂಪು ನಿವಾಸಿ ಹುಬ್ಬಳ್ಳಿ ಮೂಲದ ಕೂಲಿ ಕಾರ್ಮಿಕ ಅಶ್ಫಾಕ್ ಎಂಬವರು ಬೈಕ್ ಅಪಘಾತದಿಂದ ಕಾಲಿಗೆ ಗಾಯವಾಗಿ ಚಿಕಿತ್ಸೆಗೆ ಹಣದ ಸಮಸ್ಯೆ ಇದ್ದ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದರು.

ಈ ಬಗ್ಗೆ ದಾನಿಗಳ ಸಹಕಾರ ಕೋರಿ ಸುದ್ದಿ ಪತ್ರಿಕೆಯಲ್ಲಿ ವರದಿಯನ್ನು ಪ್ರಕಟಿಸಲಾಗಿತ್ತು. ಇದಕ್ಕೆ ಸ್ಪಂದಿಸಿದ ದಾನಿಗಳು ಸಹಕಾರವನ್ನು ನೀಡಿದ್ದಾರೆ. ಸುಳ್ಯ ಖಾಸಗಿ ಬಸ್ಸು ನಿಲ್ದಾಣದ ಬಳಿ ಇರುವ ಪಾನ್ ಬಂಡಾರ್ ಬೀಡ ಅಂಗಡಿಯ ಮಾಲಕ ಮಹಮ್ಮದ್ ಮುಫೀಲ್ ರವರು ದಾನಿಗಳ ಸಹಕಾರ ಪಡೆದು ಧನಸಂಗ್ರಹ ಮಾಡಿ ಸಹಕರಿಸಿದ್ದು, ಅಲ್ಲದೆ ಸುದ್ದಿ ಪತ್ರಿಕೆಯ ವರದಿಗಾರ ಹಸೈನಾರ್ ಜಯನಗರರವರು ದಾನಿಗಳ ಸರಕಾರ ಪಡೆದು ಬಡ ಕುಟುಂಬಕ್ಕೆ ನೆರವು ನೀಡುವಲ್ಲಿ ಸಹಕಾರಿಯಾದರು. ದಲಿತ ಮುಖಂಡ ಸುಂದರ ಪಾಟಾಜೆ, ನಗರ ಪಂಚಾಯತಿ ಸದಸ್ಯ ಕೆ ಎಸ್ ಉಮ್ಮರ್ ಗಾಯಾಳುವಿನ ಕುಟುಂಬಕ್ಕೆ ಸಹಕಾರ ನೀಡುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು. ಕುಟುಂಬಕ್ಕೆ ಆಹಾರ ಸಾಮಗ್ರಿಯನ್ನು ನೀಡಲು ಸುಳ್ಯ ಪೊಲೀಸ್ ಠಾಣೆಯಿಂದಲೂ ಠಾಣೆಯ ಅಧಿಕಾರಿಗಳು ಸಿಬ್ಬಂದಿಗಳು ಸಹಕಾರವನ್ನು ನೀಡಿದ್ದಾರೆ.

ಬಕ್ರೀದ್ ಹಬ್ಬ ಆಚರಣೆಗೆ ಕುಟುಂಬದ ಸದಸ್ಯರಿಗೆ ಬಟ್ಟೆ ಬರೆಗಳನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಸುದ್ದಿ ಸಂಸ್ಥೆಯ ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಮ್ಮನೆ ಉಪಸ್ಥಿತರಿದ್ದರು.

ಗಾಯಾಳು ವ್ಯಕ್ತಿ ಅಸ್ಫಾಕ್ ಈಗ ಚೇತರಿಸಿಕೊಳ್ಳುತ್ತಿದ್ದು, ಸುಳ್ಯದ ಗುರುಂಪುವಿನ ಬಾಡಿಗೆ ಮನೆಯಲ್ಲಿ ತುಂಬು ಗರ್ಭಿಣಿ ಪತ್ನಿ ಹಾಗೂ ಮೂರು ವರ್ಷ ಹಾಗೂ ಒಂದು ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದು ಮನೆಯ ಖರ್ಚಿಗೂ ಸಂಕಷ್ಟದಲ್ಲಿ ಇದ್ದು ಸುಳ್ಯದ ದಾನಿಗಳ ನೆರವಿಗೆ ಅವರು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.