ಸುಳ್ಯ ತಾಲೂಕಿನ ನಾಲ್ಕು ಶಾಲೆಗಳಿಗೆ ಆಂಗ್ಲ ಮಾಧ್ಯಮ ತರಗತಿ ಪ್ರಾರಂಭಿಸಲು ಸರಕಾರದಿಂದ ಹಸಿರು ನಿಶಾನೆ

0

ಸರಕಾರಿ ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ ಹಾಲಿ ಇರುವ ಕನ್ನಡ ಮಾಧ್ಯಮ ತರಗತಿಗಳ ಜೊತೆಗೆ ಸುಳ್ಯ ತಾಲೂಕಿನ ನಾಲ್ಕು ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿಗಳನ್ನು ಈ ಶೈಕ್ಷಣಿಕ ವರ್ಷದಿಂದಲೇ ಆರಂಭಿಸಲು ಸರಕಾರ ಹಸಿರು ನಿಶಾನೆ ತೋರಿದೆ.

ಸುಳ್ಯ ತಾಲೂಕಿನ ದೇವಚಳ್ಳ, ಪಂಜ, ಅರಂತೋಡು ಹಾಗೂ ಅಜ್ಜಾವರ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿ ನಡೆಸಲು ಅನುಮತಿ ನೀಡಲಾಗಿದೆ.