ಪಂಜ ದೇವಸ್ಥಾನದ ಗದ್ದೆಯಲ್ಲಿ ನೇಜಿ ನಾಟಿ – ವಿದ್ಯಾರ್ಥಿಗಳಿಗೆ ಗದ್ದೆಯಲ್ಲೊಂದು ಪಾಠ ಕಾರ್ಯಕ್ರಮ

0

ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಗದ್ಧೆಯಲ್ಲಿ ನೇಜಿ ನಾಟಿ ಹಾಗೂ ಜೇಸಿಐ ಪಂಜ ಪಂಚಶ್ರೀ ವತಿಯಿಂದ ಪಂಜ, ನಾಗತೀರ್ಥ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಗದ್ದೆ ಯಲ್ಲೊಂದು ಪಾಠ ಕಾರ್ಯಕ್ರಮವು ನಡೆಯಿತು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ ಜೀವನ್ ಮಲ್ಕಜೆ ವಹಿಸಿದ್ದರು .ಮುಖ್ಯ ಅತಿಥಿಗಳಾಗಿ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್ ಕಾನತ್ತೂರ್, ಸಂಪನ್ಮೂಲ ವ್ಯಕ್ತಿಗಳಾಗಿ ಜೇಸಿಐ ತರಬೇತುದಾರ ತೀರ್ಥಾನಂದ ಕೊಡೆಂಕಿರಿ, ಪಂಜ ಕೃಷಿ ಇಲಾಖೆಯ ಸಹಾಯಕ ತಾಂತ್ರಿಕ ವ್ಯವಸ್ಥಾಪಕಿ ಸ್ಮಿತಾ ಎಚ್.ಎನ್ , ಜೇಸಿಐ ಪಂಜ ಪಂಚಶ್ರೀ ಕಾರ್ಯದರ್ಶಿ ಜೀವನ್ ಶೆಟ್ಟಿಗದ್ದೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿಜೇಶ್ ಹಿರಿಯಡ್ಕ ವೇದಿಕೆಗೆ ಆಹ್ವಾನಿಸಿದರು. ಜೀವನ್ ಮಲ್ಕಜೆ ಸ್ವಾಗತಿಸಿದರು. ಜೀವನ್ ಶೆಟ್ಟಿಗದ್ದೆ ವಂದಿಸಿದರು.

ನೇಜಿ ನೆಡುವ ಕಾರ್ಯಕ್ರಮ:‌ ದೇವಳದ ವತಿಯಿಂದ ಭಕ್ತರಿಂದ ನೇಜಿ ನೆಡುವ ಕಾರ್ಯಕ್ರಮ ಜರುಗಿತು .

ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ಜೇಸಿಐ ಜೀವನ್ ಮಲ್ಕಜೆ, ಜೇಸಿಐ ಪಂಜ ಪಂಚಶ್ರೀ ಸ್ಥಾಪಕ ಅಧ್ಯಕ್ಷ ದೇವಿಪ್ರಸಾದ್ ಜಾಕೆ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಮಾಯಿಲಪ್ಪ ಗೌಡ ಎಣ್ಮೂರು,ಧರ್ಮಣ್ಣ ನಾಯ್ಕ ಗರಡಿ,ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷರಾದ ಪದ್ಮನಾಭ ರೈ,ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯರಾದ ಶ್ರೀಮತಿ ರತಿ ದೇವಿ ಜಾಕೆ,ಗಂಗಾಧರ ಗೌಡ ಗುಂಡಡ್ಕ,ಕೇಶವ ಕುದ್ವ , ಜೇಸಿಐ ರಜತ ರಶ್ಮಿ ಮಹೋತ್ಸವ ಅಧ್ಯಕ್ಷ ಶಿವಪ್ರಸಾದ್ ಹಾಲೆಮಜಲು,ರವಿ ನಾಗತೀರ್ಥ,ಸುದರ್ಶನ ಪೆಟ್ಟಾಜೆ ಷಣ್ಮೂಖ ಕಟ್ಟ ,ಹರಿಯಪ್ಪ ಗೌಡ ಶೆಟ್ಟಿಗದ್ದೆ, ಶ್ರೀಮತಿ ಸೀತಾ ಗುಂಡಡ್ಕ, ವೇದಾವತಿ ಬೊಳ್ಳಾಜೆ, ಶ್ರೀಮತಿ ಭಾಗೀರಥಿ ಗೋಳಿಕಟ್ಟೆ, ರತಿ ಮಡಪ್ಪಾಡಿ, ನಾಗತೀರ್ಥ ಶಾಲೆ ಹಾಗೂ ಪಂಜ ಶಾಲೆ ವಿದ್ಯಾರ್ಥಿಗಳು,ಶಿಕ್ಷಕರು ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.