ಜೂ.20 : ಐವರ್ನಾಡಿನಲ್ಲಿ ಅಕ್ಕ ಹೋಟೆಲ್ ಶುಭಾರಂಭ

0

ಐವರ್ನಾಡಿನ ಮುಖ್ಯ ರಸ್ತೆ ನೆಕ್ರೆಪ್ಪಾಡಿ ಕಾಂಪ್ಲೆಕ್ಸ್ ನಲ್ಲಿ ಸಮಗ್ರ ಸಂಜೀವಿನಿ ಅಡಿಯಲ್ಲಿ ರಚನೆಯಾಗಿರುವ ತೃಪ್ತಿ ಸಂಜೀವಿನಿ ಸಂಘದ ಅಕ್ಕ ಹೋಟೆಲ್ ಜೂ.20 ರಂದು ಶುಭಾರಂಭಗೊಳ್ಳಲಿದೆ.


ಬೆಳಿಗ್ಗೆ ಗಣಹೋಮ, ನಂತರ ಪೂರ್ವಾಹ್ನ ಗಂಟೆ 10.00 ಕ್ಕೆ ಐವರ್ನಾಡಿನ ನಿವೃತ್ತ ಶಿಕ್ಷಕಿ ಹರಿಣಾಕ್ಷಿ ಜೆ.ನೂತನ ಹೋಟೆಲನ್ನು ಉದ್ಘಾಟಿಸಲಿರುವರು.


ಇಲ್ಲಿ ಸಸ್ಯಹಾರಿ,ಮಾಂಸಹಾರಿ ಊಟ,ಚಾ.ತಿಂಡಿ,ಫಾಸ್ಟ್ ಫುಡ್ ದೊರೆಯುತ್ತದೆ. ಕ್ಯಾಟರಿಂಗ್ ವ್ಯವಸ್ಥೆ ಕೂಡ ಇರುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.