ಬೆಳ್ಳಾರೆ ಬಿಜೆಪಿ ಶಕ್ತಿಕೇಂದ್ರದಲ್ಲಿ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿಯವರ ಸಂಸ್ಮರಣ ಕಾರ್ಯಕ್ರಮ

0

ಬಿಜೆಪಿ ಸ್ಥಾನೀಯ ಸಮಿತಿ ನೆಟ್ಟಾರು ಇದರ ವತಿಯಿಂದ ಜೂನ್ 23ರಂದು ಬೆಳ್ಳಾರೆ ಬಿಜೆಪಿ ಶಕ್ತಿಕೇಂದ್ರದಲ್ಲಿ ಜನ ಸಂಘದ ಸ್ಥಾಪಕರಾದ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿಯವರ ಸಂಸ್ಮರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಸಂಸ್ಥಾಪಕರ ಬಗ್ಗೆ ಸುಳ್ಯ ಬಿಜೆಪಿ ಮಂಡಲ ಸಮಿತಿ ಉಪಾಧ್ಯಕ್ಷರಾದ ಸ್ವಯಂ ನಿವೃತ್ತ ಕಸ್ಟಮ್ಸ್ ಅಧಿಕಾರಿ,ವಕೀಲರಾದ ಆರ್. ಕೆ ಭಟ್ ಕುರುಂಬುಡೇಲು ಮಾತನಾಡಿದರು. ಜಿಲ್ಲಾ ಹಿಂದುಳಿದ ವರ್ಗ ಮೋರ್ಚಾದ ಕಾರ್ಯದರ್ಶಿ , ಬೆಳ್ಳಾರೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಚಂದ್ರಶೇಖರ ಪನ್ನೆ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಗೌರಿ ನೆಟ್ಟಾರು, ವಾರ್ಡ್ ಸದಸ್ಯೆ ಶ್ವೇತಾ ನೆಟ್ಟಾರು, ಯೋಗ ಗುರು ಸಾಯಿ ಪ್ರಸಾದ್ ನೆಟ್ಟಾರು,ಕಾರ್ಯಕರ್ತರಾದ ಭಾಸ್ಕರ, ಗುರುಪ್ರಸಾದ್ ಹಾಗೂ ಶೈಲೇಶ್ ಹಾಜರಿದ್ದರು.

ಕಾರ್ಯಕ್ರಮದ ನೆನಪಿಗಾಗಿ ರುದ್ರಾಕ್ಷಿ ಗಿಡವನ್ನು ನೆಡಲಾಯಿತು. ಇದನ್ನು ಆರ್ ಎಸ್ ಎಸ್ ಹಿರಿಯರಾದ ಅರುಣ ಶಂಕರ ನೆಟ್ಟಾರು ನೆರವೇರಿಸಿದರು.ನೆಟ್ಟಾರು ಬೂತ್ ಸಮಿತಿ ಅಧ್ಯಕ್ಷ ಪ್ರವೀಣ್ ಚಾವಡಿಬಾಗಿಲು ಸ್ವಾಗತಿಸಿ,ಧನ್ಯವಾದವಿತ್ತರು.