ಅರಂತೋಡು,ಸಂಪಾಜೆ ಮೊಗೇರಾ ಯುವ ವೇದಿಕೆ ವಲಯ ನೂತನ ಸಮಿತಿ ರಚನೆ

0

ಮೊಗೇರ ಯುವ ವೇದಿಕೆ (ರಿ ) ಸುಳ್ಯ ಇದರ ನೇತ್ರತ್ವದಲ್ಲಿ ಅರಂತೋಡು, ಸಂಪಾಜೆ ಮೊಗೇರ ಯುವ ವೇದಿಕೆಯ ವಲಯ ನೂತನ ಸಮಿತಿಯನ್ನು ರಚಿಸಲಾಯಿತು.

ಅರಂತೋಡಿನ ಅಮೃತ ಸಭಾಭವನದಲ್ಲಿ ವೇದಿಕೆಯ ಸ್ಥಾಪಕ ಅಧ್ಯಕ್ಷ ಲೋಕೇಶ್ ಪಲ್ಲತಡ್ಕ ಇವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಆಟಿದ ಒಂಜಿ ದಿನ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ತೀರ್ಮಾನ ಕೈಗೊಳ್ಳಲಾಯಿತು.


ಈ ಸಂದರ್ಭದಲ್ಲಿ ನೂತನ ಸಮಿತಿಯನ್ನು ರಚಿಸಿ ಅಧ್ಯಕ್ಷರಾಗಿ ಮೋಹನ್ ಕುಮಾರ್ ಅಡ್ಕಬಳೆ, ಕಾರ್ಯದರ್ಶಿ ರಾಜೇಶ್ ಕಡೆಪಾಲ, ಕೋಶಧಿಕಾರಿ ಚಿದಾನಂದ ಕಟ್ಟಕೋಡಿ, ಸದಸ್ಯರುಗಳಾಗಿ ಚಂದ್ರಕುಮಾರ ಅಡ್ಕಬಳೆ, ಪುರುಷೋತ್ತಮ ಕಟ್ಟಕೋಡಿ, ಮೋಹನ್ ಪ್ರಸಾದ್ ಅಡ್ಕಬಳೆ, ಯತೀಶ್ ಕಟ್ಟಕೋಡಿ, ಜನಾರ್ಧನ ದಂಡೆಕಜೆ,ಪವನ್ ಮಾಡದಕಾನ,ಕಿರಣ್ ಮಾಡದಕಾನ, ಪ್ರಕಾಶ್ ಪಾತೆಟ್ಟಿ ಚೌಕಾರು ತೊಡಿಕಾನ, ಸುರೇಶ್ ತೊಡಿಕಾನ, ಜಯಲಕ್ಷ್ಮಿ ಕಟ್ಟಕೋಡಿ, ರಕ್ಷಿತಾ ಚಂದ್ರಕುಮಾರ್ ಅಡ್ಕಬಳೆ ಗೌರವ ಸಲಹೆಗಾರರಾಗಿ ಕೇಶವ ಮಾಸ್ತರ್ ಹೊಸಗದ್ದೆ,ದೇವಪ್ಪ ಹೈದಂಗೂರು, ಲೋಕೇಶ್ ಪಲ್ಲತಡ್ಕ,ಪ್ರಶಾಂತ್ ಬಂಗ್ಲೆಗುಡ್ಡೆ, ಚಂದ್ರಶೇಖರ್ ಬಂಗ್ಲೆಗುಡ್ಡೆ, ಪದ್ಮನಾಭ ಬಂಗೇರ ಇವರನ್ನು ಆಯ್ಕೆ ಮಾಡಲಾಯಿತು.


ಚಂದ್ರ ಕುಮಾರ್ ಅಡ್ಕಬಳೆ ಸ್ವಾಗತಿಸಿ ಚಿದಾನಂದ ಕಟ್ಟಕೋಡಿ ವಂದಿಸಿದರು.