ಮುರುಳ್ಯ ಅಲೆಕ್ಕಾಡಿ ಶಾಲೆಗೆ ಕಪಾಟು ಕೊಡುಗೆ

0

ದಿ. ಕೆ ಬಾಲಕೃಷ್ಣ ಆಳ್ವ ನೀರುಡೇಲು ಅವರ ಮೂರನೇ ವರ್ಷದ ಪುಣ್ಯತಿಥಿಯ ಸ್ಮರಣಾರ್ಥ ಅವರ ಪತ್ನಿ ಕೆ. ಕುಸುಮಾವತಿ ಆಳ್ವ ಮತ್ತು ಅವರ ಮಕ್ಕಳು ಮುರುಳ್ಯ ಸ. ಹಿ. ಪ್ರಾ. ಶಾಲೆಗೆ ಸುಮಾರು ೧೨೫೦೦ ರೂ. ಮೌಲ್ಯದ ಒಂದು ಕವಾಟು ಮತ್ತು ಒಂದು ಮೇಜನ್ನು ಕೊಡುಗೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಅವಿನಾಶ್ ಡಿ., ಅಧ್ಯಾಪಕ ವೃಂದ , ಶಾಲಾ ಮಕ್ಕಳು ಹಾಗೂ ದಿವಂಗತರ ಮಕ್ಕಳು, ಶಾಲಾ ಹಿರಿಯ ವಿದ್ಯಾರ್ಥಿಗಳಾದ ರೇಷ್ಮಾ ,ಸುಷ್ಮ, ಸೌಮ್ಯ, ಅಕ್ಷತಾ ಮತ್ತು ಅಕ್ಷಯ್ ಆಳ್ವ ಉಪಸ್ಥಿತರಿದ್ದರು. ಮುಖ್ಯಗುರುಗಳಾದ ಶ್ರೀಮತಿ ಶಶಿಕಲಾ ಪ್ರಸ್ತಾವಿಕ ಮಾತುಗಳೊಂದಿಗೆ ವಂದಿಸಿದರು.