ಗೌಡರ ಯುವ ಸೇವಾ ಸಂಘದ ಅಧ್ಯಕ್ಷರಾಗಿ ಪಿ.ಎಸ್. ಗಂಗಾಧರ್ ಆಯ್ಕೆ

0

ಸುಳ್ಯದ ಗೌಡರ ಯುವ ಸೇವಾ ಸಂಘದ ಅಧ್ಯಕ್ಷರಾಗಿ ಪಿ.ಎಸ್.ಗಂಗಾಧರ್ ಆಯ್ಕೆಯಾಗಿದ್ದಾರೆ. ಜೂ.30ರಂದು ಕೊಡಿಯಾಲಬೈಲು ಗೌಡರ ಸಮುದಾಯ ಭವನದಲ್ಲಿ ನಡೆದ ಗೌಡರ ಯುವ ಸೇವಾ ಸಂಘದ ಮಹಾಸಭೆಯ ಬಳಿಕ ನಿರ್ದೇಶಕರ ಸಭೆಯಲ್ಲಿ ಅಧ್ಯಕ್ಷರ ಆಯ್ಕೆ ನಡೆಯಿತು.

ಪ್ರಧಾನ ಕಾರ್ಯದರ್ಶಿ ಯಾಗಿ ತೀರ್ಥರಾಮ ಅಡ್ಕಬಳೆ, ಕೋಶಾಧಿಕಾರಿ ದಿನೇಶ್ ಮಡ್ತಿಲ, ಆಯ್ಕೆಯಾದರು. ಎಂ.ಜಿ.ಎಂ. ಶಾಲಾ ಸಂಚಾಲಕರಾಗಿ ದೊಡ್ಡಣ್ಣ ಬರೆಮೇಲು ಪುನರಾಯ್ಕೆಯಾದರು