ಅರಂತೋಡು: ಅರಮನೆಗಯ ಬಲ್ನಾಡು ಹೊಳೆಯ ತೂಗು ಸೇತುವೆಯಲ್ಲಿ ಸಂಚಾರ ನಿಷೇಧಕ್ಕೆ ತಹಶಿಲ್ದಾರ್ ಸೂಚನೆ

0

ಅರಂತೋಡು ಗ್ರಾಮದ ಪಿಂಡಿಮನೆ ಮಿತ್ತಡ್ಕ ರಸ್ತೆಯ ಅರಮನೆಗಯ ಎಂಬಲ್ಲಿ ಬಲ್ನಾಡು ಹೊಳೆಗೆ ನಿರ್ಮಿಸಲಾಗಿರುವ ತೂಗು ಸೇತುವೆಯು ಶಿಥಿಲಗೊಂಡಿದ್ದು “ಆಯ ತಪ್ಪಿದರೆ ಪ್ರಾಣವೇ ಗಯಾ” ಎಂಬ ವರದಿಯೊಂದು‌ ಪತ್ರಿಕೆಯಲ್ಲಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಇಂದು ಸುಳ್ಯದ ತಹಶಿಲ್ದಾರ್ ಮಂಜುನಾಥ ಜಿ ಮತ್ತು ತಾ.ಒಂ.ಇ.ಒ ರಾಜಣ್ಣ ರವರು ಸ್ಥಳಕ್ಕೆ ಭೇಟಿ ನೀಡಿ ಸೇತುವೆ ಪರಿಶೀಲಿಸಿ ಅಪಾಯದ ಸಂಭವಿಸದಂತೆ ಮುಂಜಾಗೃತ ಕ್ರಮವಾಗಿ ತೂಗುಸೇತುವೆಯಲ್ಲಿ ಸಂಚರಿಸದಂತೆ ಬ್ಯಾನರ್ ಅಳವಡಿಸಿ ಮಳೆಗಾಲದಲ್ಲಿ ತಾತ್ಕಾಲಿಕವಾಗಿ ಬಂದ್ ಮಾಡುವಂತೆ ಆದೇಶಿಸಿರುವುದಾಗಿ ತಿಳಿದು ಬಂದಿದೆ.

ತೂಗು ಸೇತುವೆಯು ಸುಮಾರು 40 ವರ್ಷದ ಹಿಂದೆ ನಿರ್ಮಿಸಲಾಗಿದೆ. ಸೇತುವೆಗೆ ಕಬ್ಬಿಣ ಹಾಗೂ ಅಡಿಕೆ ಮರಗಳನ್ನು ಬಳಸಿ ನಿರ್ಮಿಸಿದ್ದು ಅಪಾಯದ ಸ್ಥಿತಿಯಲ್ಲಿರುವುದು.


ಸೇತುವೆಯ ಮತ್ತೊಂದು ಭಾಗದಲ್ಲಿ 3 ಕುಟುಂಬಗಳು ವಾಸವಿದ್ದು ದಿನ ನಿತ್ಯ 30 ರಿಂದ 50 ಮಂದಿಓಡಾಡುತ್ತಿರುತ್ತಾರೆ.


ಇಲ್ಲಿನ ನಿವಾಸಿಗಳಿಗೆ ತಹಶಿಲ್ದಾರ್ ರವರು ಅಪಾಯದ ಬಗ್ಗೆ ಅರಿವು ಮೂಡಿಸಿ ಸೇತುವೆಯನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ಸೂಚಿಸಿದರು.


ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕರು,‌ಪಂ.ಪಿ.ಡಿ.ಒ ಮತ್ತು ಸಿಬ್ಬಂದಿ ವರ್ಗದ ವರು ಜತೆಯಲ್ಲಿದ್ದರು.