ಸೈಂಟ್ ಬ್ರಿಜಿಡ್ಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪೋಷಕ ಸಮಿತಿ ಸಭೆ

0

ಸೈಂಟ್ ಬ್ರಿಜಿಡ್ಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪೋಷಕ ಸಮಿತಿ ಸಭೆ ಜೂ.27 ರಂದು ಸೈಂಟ್ ಬ್ರಿಜಿಡ್ಸ್ ಸಭಾಂಗಣದಲ್ಲಿ ನಡೆಯಿತು.


ಸೈಂಟ್ ಬ್ರಿಜಿಡ್ಸ್ ಚರ್ಚ್ ಧರ್ಮಗುರುಗಳು ಶಾಲೆಯ ಸಂಚಾಲಕರಾದ ರೆ.ಪಾ ವಿಕ್ಟರ್ ಡಿಸೋಜ ಉದ್ಘಾಟಿಸಿದರು.


ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಅಂತೋನಿ ಮೇರಿ ಶೈಕ್ಷಣಿಕ ಚಿಂತನಾ ವರದಿಯನ್ನು ಮಂಡಿಸಿದರು.


ಎಸ್ ಎಸ್ ಎಲ್ ಸಿ ಯಲ್ಲಿ ರಾಜ್ಯಮಟ್ಟದಲ್ಲಿ ಅತ್ಯುತ್ತಮ ಸ್ಥಾನಗಳಿಸಿದ ಸೈಂಟ್ ಬ್ರಿಜಿಡ್ಸ್ ಶಾಲೆಯ ಹಳೇ ವಿದ್ಯಾರ್ಥಿಗಳಾದ ಸುಗುಣ ಮತ್ತು ಅನಘ ರವರನ್ನು ಅಭಿನಂದಿಸಿ ಗೌರವಿಸಲಾಯಿತು.


ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಬೆಳವಣಿಗೆಗೆ ಪೂರಕವಾದ ವಿಷಯದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಡಾ.ಸಾತ್ವಿಕ ಮಾತನಾಡಿದರು.


ಶಾಲಾ ಪೊಷಕ ಸಮಿತಿ ಅಧ್ಯಕ್ಷೆ ಶ್ರೀಮತಿ ಮಿನಾಕ್ಷಿ ಪ್ರವೀಣ್ ಶುಭ ಹಾರೈಸಿದರು ಅಮೃತ ಮಹೋತ್ಸವಕ್ಕೆ ಸಹಕರಿಸಲು ಮನವಿ ಮಾಡಿದರು.


ಸಭೆಯಲ್ಲಿ ಶಿಕ್ಷಕಿಯರಾದ ಸಿಸ್ಟರ್ ಗ್ರೇಸಿ ಡಿಸೋಜ,ಶ್ರೀಮತಿ ವಲ್ಸ,ಶ್ರೀಮತಿ ಸ್ಮಿತಾ ಯು.ಡಿ,ಶ್ರೀಮತಿ ಪಾವನ,ಶ್ರೀಮತಿ ಸುರೇಖಾ,ಶ್ರೀಮತಿ ಶಾಂತಿ ಡಿಸೋಜ,ಶ್ರೀಮತಿ ದೀಪಿಕಾ,ಶ್ರೀಮತಿ ಮೇರಿ ಡಿಸೋಜ,ಶ್ರೀಮತಿ ಗೀತಾ,ಶಿಕ್ಷಕ ಉಮೇಶ್ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಸಿಸ್ಟರ್ ಅಂತೋನಿ‌ ಸ್ವಾಗತಿಸಿ ಶಿಕ್ಷಕಿ ವಲ್ಸ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕಿ ಸ್ಮಿತಾ ಎಂ ಡಿ ಧನ್ಯವಾದ ಸಮರ್ಪಿಸಿದರು. ಸಭೆಯಲ್ಲಿ ಗತ ವರ್ಷದ ಪೊಷಕ ಸಮಿತಿ ಸದಸ್ಯರ ಆಯ್ಕೆ ಮಾಡಲಾಯಿತು.