ಸಾರ್ವಜನಿಕ ಶ್ರೀ ದೇವತಾರಾಧನಾ ಸಮಿತಿ ಬಾಳಿಲ ಮುಪ್ಪೇರ್ಯ, ಜಿಲ್ಲಾ ವೆನ್ಲಾಕ್ ಪ್ರಾದೇಶಿಕ ರಕ್ತ ಪೂರಣ ಕೇಂದ್ರ ಮಂಗಳೂರು, ನಮ್ಮ ಆರೋಗ್ಯ ಧಾಮ ಅಯ್ಯನಕಟ್ಟೆ ಮತ್ತು ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗಾ ಇದರ ಸಹಭಾಗಿತ್ವದಲ್ಲಿ ವಿವಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಡಾ. ಪಿ.ಜಿ.ಎಸ್.ಎನ್ ಪ್ರಕಾಶ್ ರವರ ಸಂಸ್ಮರಣೆ ಹಾಗೂ ಸ್ವಯಂ ಪ್ರೇರಿತ ರಕ್ತದಾನ ವೈದ್ಯಕೀಯ ಶಿಬಿರವು ಅ. 20ರಂದು ನಮ್ಮ ಆರೋಗ್ಯ ಧಾಮ ಅಯ್ಯನಕಟ್ಟೆಯಲ್ಲಿ ನಡೆಯಿತು.









ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವತಾರಾಧನಾ ಸಮಿತಿಯ ಗೌರವಾಧ್ಯಕ್ಷರಾದ ಯು. ರಾಧಾಕೃಷ್ಣ ರಾವ್ ವಹಿಸಿದ್ದರು. ಸುಳ್ಯದ ಕೆ.ವಿ.ಜಿ ಐ.ಟಿ.ಐ ಪ್ರಾಂಶುಪಾಲರಾದ ಚಿದಾನಂದ ಗೌಡ ಡಾ. ಪ್ರಕಾಶ್ ರವವರ ಸಂಸ್ಮರಣಾ ಮಾತುಗಳನ್ನಾಡುತ್ತಾ ಅವರ ನೆನಪುಗಳನ್ನು ಹಂಚಿಕೊಂಡರು.
ಶ್ರೀಮತಿ ಲತಾ ಶಂಕರಿ ಚಿಕಿತ್ಸಾ ಬಾಳಿಲ, ಡಾ. ಕಿಶನ್ ರಾವ್ ಬಾಳಿಲ, ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗಾ ಇದರ ಅಧ್ಯಕ್ಷೆ ಲ. ಉಷಾ ಬಿ. ಭಟ್ ವೈದ್ಯರುಗಳಾದ ಮಕ್ಕಳ ತಜ್ಞೆ ಡಾ. ಮಧುಶ್ರೀ, ಡಾ . ಪಲ್ಲವಿ, ಡಾ. ಕಿರಣ್ ಯು ಹಾಗೂ ವೆನ್ಲಾಕ್ ಆಸ್ಪತ್ರೆಯ ರಕ್ತಪೂರಣ ಕೇಂದ್ರದ ಅಶೋಕ್, ಸಮಿತಿಯ ಅಧ್ಯಕ್ಷರಾದ ಶೇಷಪ್ಪ ಪರವ ಮಹಿಳಾ ಸಮಿತಿ ಅಧ್ಯಕ್ಷೆ ಶ್ರೀಮತಿ ಕಮಲಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಿತಿಯ ಕಾರ್ಯಾಧ್ಯಕ್ಷ ಸುಧಾಕರ ರೈ ಎ.ಎಂ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಧಾನ ಕಾರ್ಯದರ್ಶಿ ರಾಜೆಶ್ ಸುವರ್ಣ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.










