ಆಲೆಟ್ಟಿ ಸಹಕಾರಿ ಸಂಘದ ಅಧ್ಯಕ್ಷರಾಗಿ ಜಯಪ್ರಕಾಶ್ ಕುಂಚಡ್ಕ, ಉಪಾಧ್ಯಕ್ಷರಾಗಿ ಹರಿಪ್ರಸಾದ್ ಕಾಪುಮಲೆ ಅವಿರೋಧ ಆಯ್ಕೆ

0

ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಅಭ್ಯರ್ಥಿಗಳು 11 ಸ್ಥಾನವನ್ನು ಗಳಿಸಿಕೊಂಡು ಆಡಳಿತ ಮಂಡಳಿಯ ಅಧಿಕಾರವನ್ನು ತಮ್ಮದಾಗಿಸಿಕೊಂಡಿದ್ದು ಜ.31 ರಂದು ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯು ಸಂಘದ ಸಭಾಭವನದಲ್ಲಿ ನಡೆಯಿತು.

ಮುಂದಿನ ಅವಧಿಗೆ ನೂತನಅಧ್ಯಕ್ಷರಾಗಿ ಜಯಪ್ರಕಾಶ್ ಕುಂಚಡ್ಕ ಹಾಗೂ ಉಪಾಧ್ಯಕ್ಷರಾಗಿ ಹರಿಪ್ರಸಾದ್
ಕಾಪುಮಲೆ ಯವರು ಅವಿರೋಧವಾಗಿ ಆಯ್ಕೆಯಾದರು.
ಸಂಘದನಿರ್ದೇಶಕರಾಗಿ ಶ್ರೀಪತಿ ಭಟ್ ಮಜಿಗುಂಡಿ,
ಕರುಣಾಕರ ಹಾಸ್ಪಾರೆ, ಸುಧಾಕರ ಆಲೆಟ್ಟಿ, ಚಿದಾನಂದ ಕೋಲ್ಚಾರು,
ಶ್ರೀಮತಿ ವಿದ್ಯಾ ಕುಡೆಕಲ್ಲು ,ಶ್ರೀಮತಿ
ಉಷಾ ಪಾಲಡ್ಕ,
ಉಮೇಶ್ ನಾಯ್ಕ್ ಮಜಿಗುಂಡಿ, ಗಂಗಾಧರ ಬಿ.ಕೆ ಬಡ್ಡಡ್ಕ,
ಧರ್ಮಪಾಲಕೊಯಿಂಗಾಜೆ,ರಾಮದಾಸ ಮೊರಂಗಲ್ಲು ರವರನ್ನು ಆಯ್ಕೆ ಮಾಡಲಾಯಿತು.

ಚುನಾವಣಾಧಿಕಾರಿ ವಿಲಾಸ್ ರವರು ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ವಲಯ ಮೇಲ್ವಿಚಾರಕ ಪ್ರತಾಪ್ ಉಪಸ್ಥಿತರಿದ್ದರು.
ನೂತನವಾಗಿಆಯ್ಕೆಯಾದಅಧ್ಯಕ್ಷಉಪಾಧ್ಯಕ್ಷರನ್ನು ಮತ್ತು ನಿರ್ದೇಶಕರನ್ನು ಅಭಿಮಾನಿಗಳು ಮತ್ತು
ಪಕ್ಷದ ಪ್ರಮುಖರು,
ಸಂಘದ ಸಿ.ಇ.ಒ ದಿನಕರ ಆಲೆಟ್ಟಿ ಹಾಗೂ ಸಿಬ್ಬಂದಿ ವರ್ಗದವರುಹಾರಾರ್ಪಣೆ ಮಾಡಿ ಪುಷ್ಪಗುಷ್ಷ ನೀಡಿ ಅಭಿನಂದಿಸಿದರು.