ಕಂಚು ಕಲ್ಲಿಗೆ ತೆಂಗಿನ ಕಾಯಿ ಒಡೆಯುವುದರ ಮೂಲಕ ಇತಿಹಾಸ ಪ್ರಸಿದ್ಧ ಕಂದ್ರಪ್ಪಾಡಿ ಜಾತ್ರೆಗೆ ಮುಹೂರ್ತ

0

ಇನ್ನು ಧ್ವಜಾವರೋಹಣದ ತನಕ ಕಂದ್ರಪ್ಪಾಡಿ ಶ್ರೀ ದೈವಗಳ ಸೀಮೆಗೆ ಒಳಪಟ್ಟ ಗ್ರಾಮಗಳಲ್ಲಿ ಪೂರ್ವ ಪದ್ದತಿಯ ಪ್ರಕಾರ ಮದುವೆ ಹಾಗೂ ಇನ್ನಿತರ ಯಾವುದೇ ಶುಭ ಕಾರ್ಯಗಳನ್ನು ನಡೆಸುವಂತಿಲ್ಲ

ಇತಿಹಾಸ ಪ್ರಸಿದ್ಧ ಕಂದ್ರಪ್ಪಾಡಿ ಶ್ರೀ ರಾಜ್ಯ ದೈವ ಮತ್ತು ಪುರುಷ ದೈವ ದೈವಸ್ಥಾನ, ಇದರ ಜಾತ್ಸವಕ್ಕೆ ಕಂಚು ಕಲ್ಲಿಗೆ ತೆಂಗಿನಕಾಯಿ ಒಡೆಯುವುದರ ಮೂಲಕ ಮುಹೂರ್ತ ನಡೆಸಲಾಯಿತು.

ಇಂದು (ಫೆ. 10) ಬೆಳಿಗ್ಗೆ 9:00ಕ್ಕೆ ಸರಿಯಾಗಿ ಮಣಿಯಾನದಲ್ಲಿರುವ ಶ್ರೀ ಶಂಕಚೂಡ ಕ್ಷೇತ್ರದಲ್ಲಿ ವಾಡಿಕೆಯ ಸಂಪ್ರದಾಯದಂತೆ ಕಂಚಿ ಕಲ್ಲಿಗೆ ತೆಂಗಿನ ಕಾಯಿ ಒಡೆಯಲಾಯಿತು. ಮಾ.14, 15ರಂದು ಜಾತ್ರೋತ್ಸವ ನಡೆಯಲಿದೆ.

ಪ್ರತೀ ವರ್ಷ ಜಾತ್ರಾ ಮುಹೂರ್ತ ನಡೆದ ಬಳಿಕ ( ಕಂಚು ಕಲ್ಲಿಗೆ ತೆಂಗಿನ ಕಾಯಿ ಹೊಡೆಯುವುದು) ಫೆ. 10 ರಿಂದ ಮಾ. 15ರ ಧ್ವಜಾವರೋಹಣದ ತನಕ ಕಂದ್ರಪ್ಪಾಡಿ ಶ್ರೀ ದೈವಗಳ ಸೀಮೆಗೆ ಒಳಪಟ್ಟ ಗ್ರಾಮಗಳಲ್ಲಿ ಪೂರ್ವ ಪದ್ದತಿಯ ಪ್ರಕಾರ ಮದುವೆ ಹಾಗೂ ಇನ್ನಿತರ ಯಾವುದೇ ಶುಭ ಕಾರ್ಯಗಳನ್ನು ನಡೆಸುವಂತಿಲ್ಲ ಎಂಬ ಸಂಪ್ರದಾಯವಿದೆ.

ಈ ಸಂದರ್ಭದಲ್ಲಿ ದೈವಸ್ಥಾನದ ಪ್ರಮುಖರಾದ ಕಾಳಿಕಾಪ್ರಸಾದ್ ಮುಂಡೋಡಿ, ಬೆಳ್ಯಪ್ಪ ಗೌಡ ಕಡ್ತಲ್ ಕಜೆ, ವೆಂಕಟ್ ವಳಲಂಬೆ, ಪುರುಷೋತ್ತಮ ಮಣಿಯನ, ಸೋಮಶೇಖರ ಕೇವಳ, ಉದಯಕುಮಾರ್ ದೇರಪ್ಪಜನಮನೆ, ಕಿಶೋರ್ ಕುಮಾರ್ ಪೈಕ ಬೊಮ್ಮದೆರೆ, ವೇಣುಕುಮಾರ್ ಚಿತ್ತಡ್ಕ, ಲಿಂಗಪ್ಪ ಗೌಡ ಚಿತ್ತಡ್ಕ, ಪ್ರೀತಮ್ ಮುಂಡೋಡಿ, ದಿವಾಕರ ಮುಂಡೋಡಿ, ಕುಶಾಲಪ್ಪ ಮಾಸ್ಟರ್ ರುದ್ರಚಾಮುಂಡಿ, ಜಗದೀಶ್ ಪೈಕ, ಹರ್ಷಕುಮಾರ್ ಮುಂಡೋಡಿ, ಹರಿಶ್ಚಂದ್ರ ಮಣಿಯನ, ಉದಯರವಿ ರುದ್ರಚಾಮುಂಡಿ ಮತ್ತಿತರರು ಉಪಸ್ಥಿತರಿದ್ದರು.