ಪಯಸ್ವಿನಿ ನದಿಯಲ್ಲಿ ಮೀನುಗಳು ಸತ್ತು ನೀರು ಕಲುಷಿತವಾಗುತ್ತಿದೆ – ಆದ್ದರಿಂದ ನದಿಯನ್ನು ರಕ್ಷಿಸಿ

0

ಕೇರ್ಪಳ ಪಯಸ್ವಿನಿ ಯುವಕ ಮಂಡಲದಿಂದ ನ.ಪಂ.ಗೆ ಮನವಿ

ಪಯಸ್ವಿನಿ ನದಿಯಲ್ಲಿ ಮೀನುಗಳು ಸಾವಿಗೀಡಾದ ಪರಿಣಾಮ ನೀರು ಕಲುಷಿತಗೊಳ್ಳುತ್ತಿದೆ. ಇದರಿಂದ ನದಿಯನ್ನು ರಕ್ಷಿಸಬೇಕು ಎಂದು ಕೇರ್ಪಳ ಪಯಸ್ವಿನಿ ಯುವಕ ಮಂಡಲದ ವತಿಯಿಂದ ನಗರ ಪಂಚಾಯತ್ ಗೆ‌ ಮನವಿ ಸಲ್ಲಿಸಲಾಯಿತು.

ಫೆ.9ರಂದು ಸುಳ್ಯದ ಪಯಸ್ವಿನಿ ನದಿಯಲ್ಲಿ ನದಿಯಲ್ಲಿ ವಿಷ ತ್ಯಾಜ್ಯ ಹರಿದು ಸಾವಿರಾರು ಮೀನುಗಳು ಸಾವಿಗೀಡಾಗಿದೆ. ಇಲ್ಲದಿದ್ದರೆ ಆ ರೀತಿಯಲ್ಲಿ ಮೀನುಗಳು ಸಾಯಲು ಸಾಧ್ಯವಿಲ್ಲ. ಇದೇ ಪಯಸ್ವಿನಿ ನೀರನ್ನು ಜನರು ಕೂಡಾ ಕುಡಿಯಲು ಹಾಗೂ ದಿನ ನಿತ್ಯ ಉಪಯೋಗಕ್ಕೆ ಬಳಕೆ ಮಾಡುತ್ತಿದ್ದು ಇದೇ ರೀತಿ ಮುಂದುವರಿದರೆ ಮುಂದೆ ಜನರ ಜೀವಕ್ಕೂ ಅಪಾಯ ಎದುರಾಗಬಹುದಾಗಿದೆ. ಆದ್ದರಿಂದ ಸುಳ್ಯದಲ್ಲಿ ಹರಿಯುವ ಪಯಸ್ವಿನಿ ನದಿಗೆ ಎಲ್ಲೆಲ್ಲಿ ತ್ಯಾಜ್ಯಗಳು ಹರಿಯುತ್ತಿದೆ ಎಂಬುದನ್ನು ತಾವುಗಳು ತಕ್ಷಣ ಪತ್ತೆ ಮಾಡಿ ಅದನ್ನು ತಡೆದು ಪಯಸ್ವಿನಿ ನದಿಯನ್ನು ರಕ್ಷಿಸಬೇಕು. ಮತ್ತು ಪಯಸ್ವಿನಿ ನದಿಯಲ್ಲಿ ಮೀನು ಹಿಡಿಯುವುದನ್ನು ಸಂಪೂರ್ಣ ನಿಷೇಧ ಮಾಡಬೇಕೆಂದು. ಮತ್ತು ಈಗ ಸಾವಿರಾರು ಸಂಖ್ಯೆಯಲ್ಲಿ ಮೀನು ಸಾವಿಗೀಡಾಗಲೂ ಏನು ಕಾರಣ ಎನ್ನುವುದನ್ನು ಪತ್ತೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಪೋಲೀಸ್ ಇಲಾಖೆಗೆ ತಾವು ಸೂಚಿಸಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.

ಪಯಸ್ವಿನಿ ಯುವಕ ಮಂಡಲದ ಪದಾಧಿಕಾರಿಗಳಾದ ವಿನ್ಯಾಸ್ ಕುರುಂಜಿ, ದಿನೇಶ್ ಭಸ್ಮಡ್ಕ, ಲಕ್ಷ್ಮೀಶ್ ದೇವರಕಳಿಯ, ಶಿವಪ್ರಸಾದ್ ಕೇರ್ಪಳ ಇದ್ದರು.

ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್ ರಿಗೂ‌ ಮನವಿ ಸಲ್ಲಿಸಲಾಯಿತು.