














ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಾಲ್ಕೂರು ಗ್ರಾಮದ ಹಾಲೆಮಜಲಿನ ಆಶಕ್ತ ಮಹಿಳೆ ಯಮುನಾ ಅಮೆರವರಿಗೆ ಮನೆ ರಚನೆಗಾಗಿ ರೂ. ೩೦,೦೦೦/- ಅನುದಾನ ಮಂಜೂರು ಆಗಿದ್ದು, ಇದರ ಮಂಜೂರಾತಿ ಪತ್ರವನ್ನು ಸುಳ್ಯ ತಾಲೂಕಿನ ಶ್ರೀ ಕ್ಷೇ ಧ ಗ್ರಾ ಯೋಜನೆಯ ಯೋಜನಾಧಿಕಾರಿಯವರಾದ ಮಾಧವ ಗೌಡರವರು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಹಾಲೆಮಜಲು ಒಕ್ಕೂಟದ ಅಧ್ಯಕ್ಷರಾದ ಲೋಹಿತ್ ಚೆಮ್ನೂರು, ವಲಯದ ಮೇಲ್ವಿಚಾರಕರಾದ ಬಾಲಕೃಷ್ಣ ಗೌಡ, ಸೇವಾಪ್ರತಿನಿಧಿ ಹರಿಶ್ಚಂದ್ರ ಕೆ., ಒಕ್ಕೂಟ ಪದಾಧಿಕಾರಿಗಳು, ಸಂಘಗಳ ಸದಸ್ಯರು ಉಪಸ್ಥಿತರಿದ್ದರು.










