ಬಳ್ಳಡ್ಕ ಶ್ರೀ ಕುಮಾರಸ್ವಾಮಿ ಶಿವ ಮಠದಲ್ಲಿ ಶ್ರೀದೇವರ ಪೂಜೆ

0

ಉಬರಡ್ಕ ಮಿತ್ತೂರು ಗ್ರಾಮದ ಬಳ್ಳಡ್ಕ ಶ್ರೀ ಕುಮಾರಸ್ವಾಮಿ ಶಿವ ಮಠದಲ್ಲಿ ಶ್ರೀದೇವರ ಪೂಜೆಯು ಇಂದು ನಡೆಯಿತು.
ನಿನ್ನೆ ರಾತ್ರಿ ಉಗ್ರಾಣ ತುಂಬಿಸುವುದು,


ಇಂದು ಬೆಳಿಗ್ಗೆ ಗಣಪತಿ ಹವನ, ನಾಗನ ಪೂಜೆ, ನಡೆದು ಮಧ್ಯಾಹ್ನ ಶ್ರೀದೇವರ ಪೂಜೆ ಹಣ್ಣು ಕಾಯಿ ಕಾಣಿಕೆ ವಗೈರೆ ನಡೆಯಿತು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿರುವುದು.

ಈ ಸಂದರ್ಭದಲ್ಲಿ ಜೀಣೋದ್ಧಾರ ಸಮಿತಿ ಗೌರವಾಧ್ಯಕ್ಷ ಬಳ್ಳಡ್ಕ ನಾರಾಯಣ ಗೌಡ, ಅಧ್ಯಕ್ಷ ಬಿ.ಎಲ್.ಶಿವರಾಮ, ಕಾರ್ಯದರ್ಶಿ ತೀರ್ಥವರ್ಣ, ಖಜಾಂಜಿ ಬಿ. ಬೆಳ್ಯಪ್ಪ ಗೌಡ, ಧರ್ಮದೈವದ ಪಾತ್ರಿ ಶಿವರಾಮ ಗೌಡ, ಕುಟುಂಬದ ಅರ್ಚಕ ಬಿ.ಈಶ್ವರಪ್ಪ ಗೌಡ ಹಾಗೂ ಗೌರವ ಸಲಹೆಗಾರರು, ಸದಸ್ಯರು, ಹಾಗೂ ಭಕ್ತಾದಿಗಳು ಇದ್ದರು.