ಸುಳ್ಯಕ್ಕೆ ಸಂಜೆಯೇ ವಿದ್ಯುತ್ ಸರಬರಾಜು ಆಗಬೇಕಾಗಿತ್ತು. ಆದರೆ ಲೈನ್ ಕೆಲಸ ಮಾಡುವಾಗ ತಾಂತ್ರಿಕ ಅಡಚಣೆ ಉಂಟಾಗಿ ತಡಮಾಡಿದೆ. ಈಗಲೂ ಕುಂಬ್ರ ಭಾಗದಲ್ಲಿ ಕೆಲಸ ನಡೆಯುತ್ತಿದೆ. ಕೆಲವೇ ಸಮಯದಲ್ಲಿ ಸುಳ್ಯಕ್ಕೆ ವಿದ್ಯುತ್ ಸರಬರಾಜು ಆಗುತ್ತದೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.















ಬೆಳಗ್ಗೆ ಹೋದ ಕರೆಂಟು ಸಂಜೆಯಾದರೂ ಬರಲಿಲ್ಲ. ಸುದ್ದಿಕಚೇರಿಗೆ ಹಲವು ಮಂದಿ ಕರೆ ಮಾಡಿ ಸುಳ್ಯದ ವಿದ್ಯುತ್ ಅವ್ಯವಸ್ಥೆ ಕುರಿತು ಬೇಸರ ತೋಡಿಕೊಂಡರು.
ಬಳಿಕ ಸುದ್ದಿ ವತಿಯಿಂದ ಸುಳ್ಯ ಮೆಸ್ಕಾಂ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಜನರ ಸಮಸ್ಯೆಯನ್ನು ಅಧಿಕಾರಿಗಳ ಮುಂದಿರಿಸಿದಾಗ ಅವರು ಈ ರೀತಿ ಹೇಳಿದ್ದಾರೆ.









