ಕೇಂದ್ರ ಸರ್ಕಾರದ ಪ್ರಸಾದ್ 2.0 ಯೋಜನೆ
ಸುಳ್ಯ ತಾಲೂಕಿನ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಮತ್ತು ‘ದಕ್ಷಿಣ ಕಾಶಿ’ ಎಂದು ಪ್ರಸಿದ್ದವಾದ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನವನ್ನು ಕೇಂದ್ರ ಸರ್ಕಾರದ ಪ್ರಸಾದ್ 2.0 ಯೋಜನೆಯಡಿ ಅಡಿಯಲ್ಲಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ
ದಕ್ಷಿಣ ಕನ್ನಡದ ಈ ಎರಡು ದೇವಾಲಯಗಳನ್ನು ಧಾರ್ಮಿಕ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರವು ಕೇಂದ್ರ ಪ್ರವಾಸೋದ್ಯಮ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಈ ಪ್ರಸ್ತಾವನೆಯಲ್ಲಿ ತೊಡಿಕಾನ ಕ್ಷೇತ್ರಕ್ಕೆ ರೂ.3387 ಲಕ್ಷ ಮತ್ತು ಉಪ್ಪಿನಂಗಡಿ ಕ್ಷೇತ್ರಕ್ಕೆರೂ. 4967.50 ಲಕ್ಷ ಅನುದಾನ ಬಗ್ಗೆ ಪ್ರಸ್ತಾವನೆ ಸಲ್ಲಿಸಿದೆ.










ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಈ ದೂರದೃಷ್ಟಿಯ ಯೋಜನೆಯ ಅಡಿಯಲ್ಲಿ ಜಿಲ್ಲೆಯ ಈ ಎರಡು ದೇವಾಲಯಗಳು ಉನ್ನತ ಯಾತ್ರಾ ಸ್ಥಳವಾಗಿ ಬದಲಾಗುವ ಕಾಲ ಸನ್ನಿಹಿತವಾಗಿದೆ.ಈ ಯೋಜನೆ ಬಗ್ಗೆ ಸಂಸದ ಬ್ರಿಜೇಶ್ ಚೌಟ ಮತ್ತು ಜಿಲ್ಲಾ ಬಿಜೆಪಿ ಪ್ರಕೋಷ್ಠ ಗಳ ಸಹ ಸಂಚಾಲಕರಾದ ಪ್ರಸನ್ನ ದರ್ಬೆ ಅಧಿಕಾರಿ ವಲಯದಲ್ಲಿ ಡಿಸೈನ್ ಅನುಮೋದನೆಗೊಳಿಸುವಲ್ಲಿ ಮುತುವರ್ಜಿ ವಹಿಸಿದ್ದಾರೆ. 2 ದೇವಾಲಯಗಳ ಈ ಹಿಂದಿನ ವ್ಯವಸ್ಥಾಪನ ಸಮೀತಿಯವರು ಯೋಜನೆಯನ್ನು ತಯಾರಿಸಿಸುವಲ್ಲಿ ಶ್ರಮವಹಿಸಿರುತ್ತಾರೆ.










