ಗುರುಂಪಿನಲ್ಲಿ ನೀರು ಪೋಲಾಗುತ್ತಿದೆ : ನಗರಾಡಳಿತಕ್ಕೆ ಇದು ಕಾಣುತ್ತಿಲ್ಲವೇ?

0

ಸುಳ್ಯ‌ ನಗರದ ಗುರುಂಪಿನಲ್ಲಿ ಕೆಲವು ದಿನಗಳಿಂದ ರಸ್ತೆಯಲ್ಲಿ ಪೈಪ್ ತುಂಡಾಗಿ ನೀರು ಪೋಲಾಗುತ್ತಿದೆ ಎಂದು ಸಾರ್ವಜನಿಕರು ದೂರಿಕೊಂಡಿದ್ದಾರೆ.

ಈ ಕುರಿತು ಸುದ್ದಿಗೆ ಮಾಹಿತಿ ನೀಡಿದ ರಹೀಮ್ ಎಂಬವರು “10 ದಿನಗಳಿಂದ ರಸ್ತೆಯಲ್ಲಿ ನೀರು ಹರಿಯುತ್ತಿದೆ. ಬೇಸಗೆಯಲ್ಲಿ ನೀರಿಲ್ಲದ ಪರಿಸ್ಥಿತಿ ಎದುರಾಗುವಾಗ ನಗರಾಡಳಿತಾ ಯಾಕೆ ಈ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.