ಅರಣ್ಯ ಇಲಾಖೆಯ ವಿರೋಧದ ನಡುವೆಯೂ ಸ್ಥಳದಲ್ಲಿ ಸ್ವಚ್ಛತಾ ಕಾರ್ಯ ಪೂರ್ತಿಗೊಳಿಸಿದ ಸ್ಥಳೀಯರು

ಕೊಯಿನಾಡು ನೂತನವಾಗಿ ಸರಕಾರಿ ಶಾಲೆ ನಿರ್ಮಿಸುವ ಕುರಿತು ಮಾ ೩ ರಂದು ಸ್ಥಳದ ಸ್ವಚ್ಛತಾ ಕಾರ್ಯಕ್ರಮಕ್ಕೆ ಮುಂದಾಗಿದ್ದ ಸ್ಥಳೀಯರು ಹಾಗೂ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಅರಣ್ಯ ಇಲಾಖೆಯವರ ನಡುವಿನ ಚಕಾಮುಕಿ ಮಾ. ೪ ರಂದು ಕೂಡ ಮುಂದುವರಿದಿದೆ. ಇದೀಗ ಸ್ಥಳೀಯರು ಒಗ್ಗಟ್ಟಾಗಿ ನಿಂತು ಶಾಲಾ ಕಟ್ಟಡ ನಿರ್ಮಿಸಲು ತೀರ್ಮಾನಿಸಿದ್ದ ಸ್ಥಳವನ್ನು ಅರಣ್ಯ ಇಲಾಖೆಯವರ ವಿರೋಧದ ನಡುವೆಯೂ ಸ್ವಚ್ಛತಾ ಕಾರ್ಯವನ್ನು ಮಾಡಿ ಮುಗಿಸಿರುವ ಘಟನೆ ವರದಿಯಾಗಿದೆ.








ಸ್ಥಳೀಯರು ಶ್ರಮದಾನ ಮಾಡುತ್ತಿದ್ದ ಸಮಯದಲ್ಲಿ ಅರಣ್ಯ ಇಲಾಖೆಯವರು, ಈ ಸ್ಥಳ ನಮ್ಮ ಇಲಾಖೆಗೆ ಸೇರಿದ್ದು. ಇಲ್ಲಿ ಯಾವುದೇ ಶಾಲೆ ಅಥವಾ ಕಟ್ಟಡ ಕಟ್ಟಲು ಸಾಧ್ಯವಿಲ್ಲ ಎಂದು ವಿರೋಧ ವ್ಯಕ್ತಪಡಿಸಿದ್ದ ಕಾರಣ ಕಲಹ ಉಂಟಾಗಲು ಕಾರಣವಾಗಿತ್ತು.
ಬಳಿಕ ಈ ಬಗ್ಗೆ ಮಡಿಕೇರಿ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಜಂಟಿ ಸಭೆ ಕರೆದು ಮಾತುಕತೆ ಮಾಡುವುದಾಗಿಯೂ ನಿನ್ನೆ ಮಾತಾಡಿಕೊಂಡಿದ್ದರು ಎನ್ನಲಾಗಿದೆ.











