ಸುಳ್ಯದಲ್ಲಿ ಸಿಂಗಲ್ ನಂಬರ್ ಲಾಟರಿ : ನಗರ ಪಂಚಾಯತ್ ಸಭೆಯಲ್ಲಿಯೂ ಪ್ರತಿಧ್ವನಿ

0

ಪೋಲೀಸ್ ಇಲಾಖೆಗೆ ಬರೆಯಲು ಸಲಹೆ

ಸುಳ್ಯ‌ ನಗರದಲ್ಲಿ ಒಂದಂಕಿ ಲಾಟರಿಯಿಂದ ಆಗುತ್ತಿರುವ ಸಮಸ್ಯೆ ಕುರಿತು ಸದಸ್ಯರು ಪ್ರಸ್ತಾಪಿಸಿ, ಪೋಲೀಸ್ ಇಲಾಖೆಗೆ ಬರೆಯಲು ಸೂಚಿಸಿದ ಘಟನೆ ನಡೆದಿದೆ.

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಎಂ.ವೆಂಕಪ್ಪ ಗೌಡರು, “ಸುಳ್ಯದಲ್ಲಿ ಒಂದಂಕಿ ಲಾಟರಿಯಿಂದ ಜನರಿಗೆ ಸಮಸ್ಯೆ ಆಗುತ್ತಿದೆ. ಈ ಕುರಿತು ಹಲವು ಮಂದಿ ನಮಗೆ ದೂರಿಕೊಳ್ಳುತ್ತಿದ್ದಾರೆ. ಪೋಲೀಸ್ ಇಲಾಖೆಗೆ ಸೂಚಿಸಿ ಎಂದು ಹೇಳಿದರು.

ನಾಮನಿರ್ದೇಶನ ಸದಸ್ಯ ರಾಜು ಪಂಡಿತ್ ಹಾಗೂ ಸದಸ್ಯ ಶರೀಫ್ ಕಂಠಿಯವರು ಕೂಡಾ ಒಂದಂಕಿ ಲಾಟರಿ ಸಮಸ್ಯೆ ಕುರಿತು ಧ್ವನಿ ಎತ್ತಿದರು.

ಈ ಕುರಿತು ದಿಶಾ ಮೀಟಿಂಗ್ ನಲ್ಲಿಯೂ ಚರ್ಚೆ ಆಗಿದೆ ಎಂದು ಪಂಚಾಯತ್ ಅಧ್ಯಕ್ಷರು‌ ಹೇಳಿದರೆ, ಸುಳ್ಯದಲ್ಲಿ ತ್ರೈಮಾಸಿಕ ಕೆಡಿಪಿಯಲ್ಲಿಯೂ ವಿಷಯ ಬಂದಿದೆ ಎಂದು ಮುಖ್ಯಾಧಿಕಾರಿ ಹೇಳಿದರು.

ಪಂಚಾಯತ್ ವ್ಯಾಪ್ತಿಯಲ್ಲಿ ಇದು ಆಗುತ್ತಿರುವುದರಿಂದ ಪಂಚಾಯತ್ ಎಚ್ಚೆತ್ತುಕೊಳ್ಳಬೇಕು. ತಕ್ಷಣ ಪೋಲೀಸ್ ಇಲಾಖೆಗೆ ಬರೆಯಿರಿ ಎಂದು ಸದಸ್ಯರು ಸೂಚನೆ ನೀಡಿದರು.