







ಬಾಳಿಲ ವಿದ್ಯಾಬೋಧಿನಿ ವಿದ್ಯಾ ಸಂಸ್ಥೆಗಳ ಸಂಚಾಲಕರಾಗಿ ಹಲವು ವರ್ಷಗಳ ಕಾಲ ಸಂಸ್ಥೆಯನ್ನು ಮುನ್ನಡೆಸಿದ್ದ ಮುಪ್ಪೇರ್ಯ ಗ್ರಾಮದ ಹೊನ್ನಡ್ಕ ನಿವಾಸಿ ಜೋಗಿಬೆಟ್ಟು ಗೋವಿಂದ ಭಟ್ ನೆಟ್ಟಾರು ನಿನ್ನೆ ರಾತ್ರಿ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಆವರಿಗೆ 73 ವರ್ಷ ವಯಸ್ಸಾಗಿತ್ತು.
ಬಾಳಿಲ ವಿದ್ಯಾಬೋಧಿನಿ ಶಾಲೆಯಲ್ಲಿ 17 ವರ್ಷಗಳ ಕಾಲ ಸಂಚಾಲಕರಾಗಿ, ಕೆಲ ವರ್ಷ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ ವಿಜಯಲಕ್ಷ್ಮಿ, ಪುತ್ರ ಜಯರಾಮ ನೆಟ್ಟಾರು , ಪುತ್ರಿ ಉಮಾದೇವಿ ಹಾಗೂ ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.










