ಕೊಡಗು ಸಂಪಾಜೆ: ಅರೆಕಲ್ಲಿನಲ್ಲಿ ಮರಕ್ಕೆ ಬೆಂಕಿ, ಸ್ಥಳೀಯರಿಂದ ಬೆಂಕಿ ನಂದಿಸುವಿಕೆ

0

ಕೊಡಗು ಸಂಪಾಜೆ ಗ್ರಾಮದ ಅರೆಕಲ್ಲು ಮಂಜಡ್ಕ ಸಮೀಪ ಮರಕ್ಕೆ ಬೆಂಕಿ ತಗುಲಿದ್ದು , ಸ್ಥಳೀಯರು ಬೆಂಕಿ ನಂದಿಸಿ ಭಾರೀ ಪ್ರಮಾಣದ ಅನಾಹುತ ತಪ್ಪಿಸಿದ ಘಟನೆ ಮಾ. 12 ರಂದು ಬೆಳಿಗ್ಗೆ ಸಂಭವಿಸಿದೆ.

ಅರೆಕಲ್ಲು ಜಾತ್ರೆ ಪ್ರಯುಕ್ತ ಬಿಸಿಲಿನ ತಾಪಕ್ಕೆ ಬೆಂಕಿ ಪಸರಿಸದಂತೆ ಮುಂಜಾಗ್ರತಾ ಕ್ರಮವಾಗಿ ಅರಣ್ಯಾಧಿಕಾರಿಗಳು ಒಣ ಕಸಗಳಿಗೆ ಬೆಂಕಿ ಹಾಕಿದ್ದರು. ಬಳಿಕ ಬೆಂಕಿ ನಂದಿಸಿ ಬoದಿದ್ದಾರೆ ಎನ್ನಲಾಗಿದೆ. ಆದರೆ ಬೆಂಕಿಯ ಕಿಡಿ ಮರಕ್ಕೊಂದು ತಗುಲಿದ್ದು , ರಸ್ತೆಯಲ್ಲಿ ಬರುತ್ತಿದ್ದ ಸ್ಥಳೀಯರೊಬ್ಬರಾದ
ಶಿವ ಕೊಡo ಕೇರಿ ಕೂಡಲೇ ಸ್ಥಳೀಯರಿಗೆ ಕರೆ ಮಾಡಿದ್ದು, ಸ್ಥಳೀಯರು ಅರಣ್ಯ ಇಲಾಖೆ ಹಾಗೂ ಚೆಸ್ಕಾಂ ಇಲಾಖೆಯವರಿಗೆ ತಿಳಿಸಿ ಬೆಂಕಿ ನಂದಿಸಿದ್ದಾರೆ. ಈ ಸಂದರ್ಭದಲ್ಲಿ ಸ್ಥಳೀಯರಾದ ರಚನ್ ಸುಳ್ಯ ಕೋಡಿ , ಶರತ್ ಕೀಲಾರು, ಲಿಂಗಪ್ಪ ಪಡ್ಫೂು, ಕುಮಾರ್ , ಹಾಗೂ ಅರಣ್ಯಾಧಿಕಾರಿಗಳು , ಸಿಬ್ಬಂದಿ ವರ್ಗ , ಚೆಸ್ಕಾಂ ಸಿಬ್ಬಂದಿ ವರ್ಗ ಬೆಂಕಿ ನಂದಿಸುವಲ್ಲಿ ಭಾಗಿಯಾದರು.