ಸುಳ್ಯ ದ ಸಂತ ಜೋಸೆಫ್ ಶಾಲೆಯ ರಜತ ಮಹೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ 25 ಕಾರ್ಯಕ್ರಮಗಳಲ್ಲಿ ಕೊನೆಯ ಕಾರ್ಯಕ್ರಮವಾದ ಶಾಲಾ ಪಾಲಕರಾದ “ಸಂತ ಜೋಸೆಫ್” ರವರ ಹಬ್ಬವನ್ನು ಮಾ. 8ರಂದು ಆಚರಿಸಲಾಯಿತು.















ಸಮಾರಂಭದ ಸಭಾ ವೇದಿಕೆಯಲ್ಲಿ ಶಾಲಾ ಸಂಚಾಲಕರಾದ ಫಾ. ವಿಕ್ಟರ್ ಡಿ ಸೋಜರವರು ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡರು. ಮುಖ್ಯ ಅತಿಥಿಗಳಾಗಿ ನಿಡ್ಪಳ್ಳಿ ಚರ್ಚಿನ ಧರ್ಮ ಗುರುಗಳಾದ ರೆ. ಫಾ. ಜೇಸನ್ ಜೋಸೆಫ್ ಲೋಬೋ ರವರು ಆಗಮಿಸಿ ವಿದ್ಯಾರ್ಥಿಗಳಿಗೆ ಉತ್ತಮ ಸಂದೇಶ ನೀಡಿದರು. ಸೈಂಟ್ ಬ್ರಿಜಿಡ್ಸ್ ಚರ್ಚಿನ ಪಾಲನಾ ಮಂಡಳಿಯ ಕಾರ್ಯದರ್ಶಿ ಶ್ರೀಮತಿ ಜೂಲಿಯಾ ಕ್ರಾಸ್ತ, ಪ್ರೌಢಶಾಲಾ ಪೋಷಕ ಸಮಿತಿಯ ಉಪಾಧ್ಯಕ್ಷರಾದ ಹೇಮನಾಥ ಬಿ., ಪ್ರಾಥಮಿಕ ಶಾಲಾ ಪೋಷಕ ಸಮಿತಿಯ ಉಪಾಧ್ಯಕ್ಷರಾದ ಶಶಿಧರ್ ಎಂ.ಜೆ., ಪೂರ್ವ ಪ್ರಾಥಮಿಕ ಶಾಲಾ ಪೋಷಕ ಸಮಿತಿಯ ಉಪಾಧ್ಯಕ್ಷರಾದ ಪ್ರಬೋದ್ ಶೆಟ್ಟಿ, ಶಾಲಾ ಮುಖ್ಯ ಶಿಕ್ಷಕಿ ಸಿ. ಮೇರಿ ಸ್ಟೆಲ್ಲಾ ಹಾಗೂ ಶಾಲಾ ನಾಯಕರುಗಳಾದ ಹಿಮಾಂಶು ಮತ್ತು ಲಕ್ಷ್ಯಜಿತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಎಂಟನೇ ತರಗತಿಯ ವಮಿಕಾ ರವರು ಶಾಲಾ ಪಾಲಕರಾದ ಸಂತ ಜೋಸೆಫರ ಕುರಿತಾಗಿ ಭಾಷಣ ಮಾಡಿದರು ಹಾಗೂ ಹತ್ತನೇ ತರಗತಿಯ ಮರಿಯಂ ಹುದಾ ರವರು ಮಹಿಳಾ ದಿನಾಚರಣೆಯ ಕುರಿತಾಗಿ ಮಾತನಾಡಿದರು. ಏಳನೇ ತರಗತಿಯ ಪ್ರಿನ್ಸಿಯಾ ಕ್ರಾಸ್ತಾ ರವರು ಸ್ವಾಗತಿಸಿದರು. ಪ್ರಿನ್ಸಿಟಾ ಡಿ ಸೋಜ ರವರು ವಂದಿಸಿದರು ಅಭಿಯಾ ಹಾಗೂ ಸಾನ್ವಿ ಎ.ಜೆ. ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.










