








2024-25 ನೇ ಸಾಲಿನ ಎನ್.ಎಮ್.ಎಮ್.ಎಸ್, ಪರೀಕ್ಷೆಯಲ್ಲಿ ಆತ್ಮಿಕಾ ಜಿ,ಸಿ, ಗರುಗುಂಜ 180 ಅಂಕಗಳಲ್ಲಿ 106 ಅಂಕಗಳೊಂದಿಗೆ ಸುಳ್ಯ ತಾಲೂಕಿಗೆ ದ್ವಿತೀಯ ಸ್ಥಾನ ಪಡೆದಿರುತ್ತಾಳೆ. ಇವಳು ಸರಕಾರಿ ಪದವಿಪೂರ್ವ ಕಾಲೇಜು ಸುಳ್ಯದ ಪ್ರೌಢಶಾಲ ವಿಭಾಗದಲ್ಲಿ ಆಂಗ್ಲ ಮಾಧ್ಯಮದ 8ನೇ ತರಗತಿ ವಿಧ್ಯಾರ್ಥಿನಿ ಯಾಗಿದ್ದು, ಕೇರಳ ಗಡಿನಾಡು ಕಾಸರಗೋಡಿನ ಕಲ್ಲಪಳ್ಳಿಯ ಗರುಗುಂಜ ಚಿದಾನಂದ, ಮತ್ತು ಶ್ರೀಮತಿ ಸೌಮ್ಯ ದಂಪತಿಗಳ ಪುತ್ರಿ. ಹಾಗೂ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಲ್ಲಪಳ್ಳಿಯಲ್ಲಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಹಳೇ ವಿದ್ಯಾರ್ಥಿನಿ










