ದ್ವಿತೀಯ ಪಿ.ಯು.ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಪಂಜ ಸರಕಾರಿ ಪದವಿ ಪೂರ್ವ ಕಾಲೇಜುನಲ್ಲಿ ಕಲಾ ವಿಭಾಗ ಮತ್ತು ವಾಣಿಜ್ಯ ವಿಭಾಗದಲ್ಲಿ ಒಟ್ಟು 21 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಸತತ 4 ಬಾರಿಗೆ ಶೇ. 100 ಫಲಿತಾಂಶ ದಾಖಲಾಗಿದೆ.















ವಾಣಿಜ್ಯ ವಿಭಾಗದಲ್ಲಿ ಒಟ್ಟು 16ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 5ಹುಡುಗರು ಮತ್ತು 11 ಹುಡುಗಿಯರು ಪರೀಕ್ಷೆ ಬರೆದಿರುತ್ತಾರೆ. ಪಂಜದ ನೇರಳ ಹರಿಶ್ಚಂದ್ರ ಮತ್ತು ಯಮುನಾ ದಂಪತಿಗಳ ಪುತ್ರಿ ಶರಣ್ಯ ಕುಮಾರಿ ಯನ್ 563 ಅಂಕ ಮತ್ತು ಪಂಬೆತ್ತಾಡಿ ಗ್ರಾಮದ ಮಂಚಿಕಟ್ಟೆ ಧರ್ಮಪಾಲ ಗೌಡ ಮತ್ತು ವಿಮಲಾ ದಂಪತಿಗಳ ಪುತ್ರಿ ನಿಶಾ ಡಿ 551 ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಗೊಂಡಿದ್ದಾರೆ. ಉಳಿದ ಎಲ್ಲಾ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಗೊಂಡಿದ್ದಾರೆ.
ಕಲಾ ವಿಭಾಗದಲ್ಲಿಒಟ್ಟು 5 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 1 ಹುಡುಗ ಮತ್ತು 4 ಹುಡುಗಿಯರು ಪರೀಕ್ಷೆ ಬರೆದು ಎಲ್ಲರೂ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಗೊಂಡಿದ್ದಾರೆ. ಕೂತ್ಕುಂಜ ಗ್ರಾಮದ ಪುತ್ಯ ಸಾಂತಪ್ಪ ಮತ್ತು ಕುಸುಮಾವತಿ ದಂಪತಿಗಳ ಪುತ್ರಿ ಪ್ರಜ್ಞಾ ಪಿ 509 ಮತ್ತು ಕೂತ್ಕುಂಜ ಗ್ರಾಮದ ಕಲ್ಕ ನಾರಾಯಣ ಮತ್ತು ಪದ್ಮಲತಾ ದಂಪತಿಗಳ ಪುತ್ರಿ ಶ್ರಾವ್ಯ ಎನ್ ಕೆ 488 ಅಂಕ ಪಡೆದಿದ್ದಾರೆ.ಎಂದು ಪ್ರಾಂಶುಪಾಲ ವೆಂಕಪ್ಪ ಗೌಡ ಕೇನಾಜೆ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.










