‘ಕಾವೂರು ಚರಿತ್ರೆ’ ಸಾಕ್ಷ್ಯ ಚಿತ್ರ ಬಿಡುಗಡೆ
ಕ್ಷೇತ್ರದ ವೈಭವವನ್ನು ತಿಳಿಸುವ ಕಾರ್ಯ ಮಾದರಿ : ಯುವರಾಜ ಜೈನ್
ಪೂರ್ವ ಸಂಪ್ರದಾಯ ತಿಳಿಸುವ ಕಾರ್ಯ ಮಹಾವಿಷ್ಣು ಭಜನಾ ಮಂಡಳಿಯಿಂದಾಗಿದೆ : ನಾಯರ್ ಕೆರೆ
ನಮ್ಮ ಊರಿನ ದೇವಸ್ಥಾನದ ವೈಭವವನ್ನು ಹೊರಜಗತ್ತಿಗೆ ತಿಳಿಸುವ ಕಾರ್ಯವನ್ನು ಸುದ್ದಿ ಬಳಗ ಮತ್ತು ಶ್ರೀ ಮಹಾವಿಷ್ಣು ಭಜನಾ ಮಂಡಳಿಯವರು ಮಾಡಿದ್ದಾರೆ ಎಂದು ಪಂಚಸ್ಥಾಪನೆಗಳ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಯುವರಾಜ ಜೈನ್ ಬಲ್ನಾಡುಪೇಟೆ ಹೇಳಿದ್ದಾರೆ.

ಮರ್ಕಂಜ ಮತ್ತು ನೆಲ್ಲೂರು ಕೆಮ್ರಾಜೆ ಗ್ರಾಮಗಳ ಪಂಚಸ್ಥಾಪನೆಗಳಲ್ಲಿ ಒಂದಾದ ಕಾವೂರು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ ನಡೆಯುತ್ತಿದ್ದು, ಕಾವೂರು ದೇವಸ್ಥಾನದ ಇತಿಹಾಸ ಹಾಗೂ ಜಾತ್ರೋತ್ಸವದ ಮಾಹಿತಿ ನೀಡುವ ಸಾಕ್ಷ್ಯ ಚಿತ್ರ ‘ಕಾವೂರು ಚರಿತ್ರೆ’ ಬಿಡುಗಡೆ ಬಿಡುಗಡೆಗೊಳಿಸಿ ಮಾತನಾಡಿದರು.
ಕಾವೂರು ಮಹಾವಿಷ್ಣು ಭಜನಾ ಮಂಡಳಿ ಪ್ರಾಯೋಜಿಸಿರುವ ಈ ಸಾಕ್ಷ್ಯಚಿತ್ರವನ್ನು ಸುದ್ದಿ ಮೀಡಿಯಾ ಕ್ರಿಯೇಶನ್ ನಿರ್ಮಿಸಿದ್ದು, ಸುದ್ದಿ ಪತ್ರಕರ್ತ ದಯಾನಂದ ಕೊರತ್ತೋಡಿಯವರು ನಿರ್ದೇಶಿಸಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಗನ್ನಾಥ ಕಾಯರ ವಹಿಸಿದ್ದರು.








ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸುಳ್ಯ ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ ಕೆರೆ ಯವರು ಮಾತನಾಡಿ ದೇವಸ್ಥಾನ, ದೈವಸ್ಥಾನಗಳಲ್ಲಿ ನಡೆಯುವ ಎಲ್ಲ ಆಚರಣೆಗಳ ಹಿಂದೆ ಮಹತ್ವ ಇದೆ. ಪೂರ್ವ ಸಂಪ್ರದಾಯ ಉಳಿಯಬೇಕಾದರೆ ಈ ಮಹತ್ವಗಳನ್ನು ಅರಿಯಬೇಕು. ಈ ಕಾರ್ಯಕ್ಕೆ ಮಹಾವಿಷ್ಣು ಭಜನಾ ಮಂಡಳಿ ಮುಂದಾಗಿರುವುದು ಮಾದರಿ ಕಾರ್ಯ ಎಂದರು.

ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ರಾಮಚಂದ್ರ ಹಲ್ದಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಾತ್ರೋತ್ಸವ ಸಮಿತಿ ಅಧ್ಯಕ್ಷ ಅಚ್ಚುತ ಮಾಸ್ತರ್, ಮಿನುಂಗೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಶ್ರೀ ಅನ್ನಪೂರ್ಣೇಶ್ವರಿ ಯೋಗೀಶ್ವರ ಸಿದ್ದಮಠ ಮರ್ಕಂಜದ ಧರ್ಮದರ್ಶಿಗಳಾದ ರಾಜೇಶ್ ನಾಥ್ ಜೀ., ವ್ಯವಸ್ಥಾಪನಾ ಸಮಿತಿ ನಿಕಟಪೂರ್ವಧ್ಯಕ್ಷ ರಾಘವ ಗೌಡ ಕಂಜಿಪಿಲಿ, ಶ್ರೀ ಮಹಾವಿಷ್ಣು ಭಜನಾ ಮಂಡಳಿ ಅಧ್ಯಕ್ಷ ಯತೀಶ್ ಕಂಜಿಪಿಲಿ, ಸಾಕ್ಷ್ಯ ಚಿತ್ರಕ್ಕೆ ಸಾಹಿತ್ಯ ರಚಿಸಿ ಸಹಸಂಕಲನ ಮತ್ತು ನಿರ್ದೇಶನ ಮಾಡಿದ ದಯಾನಂದ ಕೊರತ್ತೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಷಣ್ಮುಖ ಸೂಟೆಗದ್ದೆ ಸ್ವಾಗತಿಸಿದರು. ಹರ್ಷಿತ್ ಮಿತ್ತಡ್ಕ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಬೃಹತ್ ಎಲ್.ಇ.ಡಿ. ಪರದೆ ಯಲ್ಲಿ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು.










