ದೇವಚಳ್ಳ ಶಾಲೆಗೆ ದಾನಿಗಳಿಂದ ಬ್ಯಾಂಡ್ ಸೆಟ್ ಕೊಡುಗೆ

0

ಇತ್ತೀಚೆಗೆ ಅದ್ದೂರಿಯಾಗಿ ಶತಮಾನೋತ್ಸವ ಕಾರ್ಯಕ್ರಮವನ್ನು ಆಚರಿಸಿಕೊಂಡಿರುವ ದೇವಚಳ್ಳ ದ.ಕ.ಜಿ.ಪಂ. ಹಿ.ಪ್ರಾ.ಶಾಲೆಗೆ ಊರಿನ ದಾನಿ, ಹಿರಿಯ ವಿದ್ಯಾರ್ಥಿಯಾದ ನವೀನ್ ಗುಡ್ಡೆ ಮತ್ತು ಮನೆಯವರು ಶಾಲೆಯ ಕಾರ್ಯಕ್ರಮಗಳಿಗೆ ಮೆರುಗು ನೀಡುವ ಸಲುವಾಗಿ ಹೊಸ ಬ್ಯಾಂಡ್ ಸೆಟ್ ಅನ್ನು ಕೊಡುಗೆಯಾಗಿ ನೀಡಿದ್ದಾರೆ.


ಸಮುದಾಯದತ್ತ ಶಾಲಾ ಕಾರ್ಯಕ್ರಮದಲ್ಲಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರು ಮತ್ತು ಮುಖ್ಯೋಪಾಧ್ಯಾಯರಿಗೆ ಇದನ್ನು ಹಸ್ತಾಂತರಿಸಲಾಯಿತು.