ಡಿಪ್ಪೋ ಮ್ಯಾನೇಜರ್ ರನ್ನು ತರಾಟೆಗೆ ತೆಗೆದುಕೊಂಡು ಪ್ರಯಾಣಿಕರು
ತಾತ್ಕಾಲಿಕ ಬಸ್ ವ್ಯವಸ್ಥೆ ಕಲ್ಪಿಸಿದ ಇಲಾಖೆ
ಪುತ್ತೂರಿನಿಂದ ಬೆಳ್ಳಾರೆ ಕುಕ್ಕುಜಡ್ಕ ರೂಟ್ ಮೂಲಕ ಸುಳ್ಯಕ್ಕೆ ಬೆಳಿಗ್ಗೆ ಸಂಚರಿಸುತ್ತಿದ್ದ ಪುತ್ತೂರು ಡಿಪ್ಪೋಗೆ ಸೇರಿದ ಬಸ್ಸನ್ನು ಪುತ್ತೂರು ಡಿಪ್ಪೋದವರು ಏ. 7ರಿಂದ ಕ್ಯಾನ್ಸಲ್ ಮಾಡಿದ್ದು, ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗೆ ಕರೆ ಮಾಡಿದ ಮೇರೆಗೆ ಏ. 8ರಂದು ತಾತ್ಕಾಲಿಕ ಬದಲಿ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ.
ಪುತ್ತೂರಿನಿಂದ ಬೆಳಿಗ್ಗೆ 7 ಗಂಟೆಗೆ ಹೊರಟು 7.45 ಕ್ಕೆ ಬೆಳ್ಳಾರೆಗೆ ತಲುಪಿ ಅಲ್ಲಿಂದ ಚೊಕ್ಕಾಡಿಯಾಗಿ ಸುಳ್ಯಕ್ಕೆ 8.50 ಕ್ಕೆ ಸುಳ್ಯಕ್ಕೆ ತಲುಪುತ್ತಿದ್ದ ಈ ಬಸ್ಸಿನ್ನು









ಕಳಂಜ, ಮುಂಡುಗಾರು, ಶೇಣಿ, ಚೊಕ್ಕಾಡಿ, ಕುಕ್ಕುಜಡ್ಕ, ಕಣಿಪ್ಪಿಲ ಭಾಗದಿಂದ ಶಾಲಾ ಕಾಲೇಜುಗಳಿಗೆ, ಕಚೇರಿ ಮತ್ತಿತರ ಕೆಲಸಗಳಿಗೆ ಹೋಗುವವರು ಅವಲಂಬಿಸಿದ್ದರು. ಹಲವಾರು ವರ್ಷಗಳಿಂದ ಸಂಚರಿಸುತ್ತಿದ್ದ ಈ ಬಸ್ಸುನ್ನು ಏ. 7ರಿಂದ ಮೇ. 31ರ ತನಕ ಸ್ಥಗಿತಗೊಳಿಸಿರುವುದಾಗಿ ತಿಳಿದುಬಂದಿದೆ. ಏ. 7ರಂದು ಈ ಬಸ್ಸಲ್ಲಿ ಪ್ರಯಾಣಿಸುವ ಪ್ರಯಾಣಿಕರು ಕಾದು ಕಾದು ಸುಸ್ತಾಗಿ ಬಸ್ ಡಿಪ್ಪೋಗೆ ವಿಚಾರಿಸಿದಾಗ ಬಸ್ ಕ್ಯಾನ್ಸಲ್ ಆಗಿರುವ ಬಗ್ಗೆ ಮಾಹಿತಿ ತಿಳಿದುಕೊಂಡು ಅನೇಕ ಮಂದಿ ಕರೆ ಮಾಡಿ ಇದರಿಂದಾಗುವ ಸಮಸ್ಯೆಯನ್ನು ಹೇಳಿಕೊಂಡ ಮೇರೆಗೆ ತಾತ್ಕಾಲಿಕವಾಗಿ ಏ. 8ರಂದು ಬೇರೆ ರೂಟ್ ಬಸ್ಸನ್ನು ಬದಲಾಯಿಸಿ ಈ ರೂಟ್ ನಲ್ಲಿ ಕಳಿಸಿದ್ದಾರೆ. ಬೆಳಿಗ್ಗೆ 7.45 ಕ್ಕೆ ಬೆಳ್ಳಾರೆಯಿಂದ ಹೊರಡುವ ಈ ಒಂದು ಬಸ್ಸನ್ನು ಬಿಟ್ಟರೆ ಸಂಜೆ 4.45ರ ತನಕ ಈ ರೂಟಲ್ಲಿ ಬೇರೆ ಬಸ್ಸಿಲ್ಲ.
ಈ ಭಾಗದ ಪ್ರಯಾಣಿಕರು ಇರುವ ಏಕೈಕ ಬಸ್ಸನ್ನು ಅವಲಂಬಿಸಿದರೆ ಇಲಾಖೆ ಇದ್ದ ಒಂದು ಬಸ್ಸನ್ನು ಕ್ಯಾನ್ಸಲ್ ಮಾಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಪ್ರಯಾಣಿಕರ ಆಕ್ರೋಶದ ಬಳಿಕ ಆರಂಭಗೊಂಡಿರುವ ಬಸ್ಸನ್ನು ಇಲಾಖೆ ಇದುವರೆಗೆ ಮುಂದುವರಿಸಿದ್ದು ಅದನ್ನು ಮತ್ತೆ ಸ್ಥಗಿತಗೊಳಿಸಿದರೆ ಜನರ ಆಕ್ರೋಶ ಎದುರಿಸಬೇಕಾಗುತ್ತದೆ.
ನಾನು ಸೇರಿದಂತೆ ಅನೇಕ ಪ್ರಯಾಣಿಕರು ಇದೇ ಬಸ್ಸಲ್ಲಿ ಬರುವುದು. ಇರುವ ಒಂದು ಬಸ್ ಸಂಚಾರವನ್ನು ಏಕಾಏಕಿ ಸ್ಥಗಿತಗೊಳಿಸಿದರೆ ನಾವೇನು ಮಾಡಬೇಕು. ಮತ್ತೆ ಈ ರೂಟಲ್ಲಿ ಸಂಜೆ 4.45 ಕ್ಕೆ ಬಸ್ ಬರುವುದು. ದಯವಿಟ್ಟು ಅಧಿಕಾರಿಗಳು, ಜನ ಪ್ರತಿನಿಧಿಗಳು ನಮ್ಮ ಸಮಸ್ಯೆಯನ್ನು ಅರಿತು ಈ ರೂಟಲ್ಲಿ ಕ್ಯಾನ್ಸಲ್ ಆದ ಬಸ್ಸನ್ನು ಮತ್ತೆ ಓಡಿಸಬೇಕಾಗಿ ವಿನಂತಿಸುತ್ತೇನೆ – ರಶ್ಮಿ ಚೊಕ್ಕಾಡಿ ಪ್ರಯಾಣಿಕರು










