ಎಣ್ಮೂರಿನಲ್ಲಿ ನೇಮೋತ್ಸವ

0


ಎಣ್ಮೂರು ಶ್ರೀ ನಾಗಬ್ರಹ್ಮ ಕೋಟಿ ಚೆನ್ನಯ್ಯ ಆದಿಗರಡಿ ನೇಮೋತ್ಸವದ ಅಂಗವಾಗಿ ಎ. ೯ರಂದು ರಾತ್ರಿ ೭ಗಂಟೆಗೆ ಎಣ್ಮೂರು ಬೀಡಿನಿಂದ ಭಂಡಾರ ಹೊರಟು ಗರಡಿ ವಠಾರದಲ್ಲಿರುವ ದೈವಸ್ಥಾನದಲ್ಲಿ ಕಾಜು ಕುಜುಂಬ ನೇಮೋತ್ಸವ ಮತ್ತು ಉಳ್ಳಾಕುಲು ನೇಮೋತ್ಸವ ನಡೆದು, ಕೈಕಾಣಿಕೆ, ಪ್ರಸಾದ ವಿತರಣೆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ನಿನ್ನೆ ರಾತ್ರಿ ಇಷ್ಟ ದೇವತೆ ನೇಮೋತ್ಸವ ನಡೆದು ಪ್ರಸಾದ ವಿತರಣೆ ಅನ್ನ ಸಂತರ್ಪಣೆ ನಡೆಯಿತು.


ಗರಡಿಯ ಅನುವಂಶಿಕ ಆಡಳ್ತೆದಾರ ರಾಮಕೃಷ್ಣ ಶೆಟ್ಟಿ ಕಟ್ಟಬೀಡುರವರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.