
ಪಾಂಡಿಪಾಲು ಕುಟುಂಬಸ್ಥರ ದೈವಗಳ ನೇಮೋತ್ಸವ ಹಾಗೂ ಪ್ರತಿಷ್ಠಾ ವಾರ್ಷಿಕೋತ್ಸವ ಏ.10 ಮತ್ತು ಏ.11 ರಂದು ಪಾಂಡಿಪಾಲು ದುಗ್ಗಪ್ಪ ಗೌಡ ಅವರ ಮನೆಯಲ್ಲಿ ನಡೆಯಿತು.

ಏ.10 ರಂದು ಗಣಹವನ, ದೈವಗಳಿಗೆ ಶುದ್ದಿ ಕಲಶ, ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಮುಡಿಪು ಪೂಜೆ ನಡೆದು ಮಂಗಳಾರತಿ ಬಳಿಕ ಪ್ರಸಾದ ವಿತರಣೆ ನಡೆದು ಅನ್ನಪ್ರಸಾದ ನಡೆಯಿತು.









ಸಂಜೆ ದೈವಗಳ ತೆಗೆದು ಬಳಿಕ ಸೂತ್ರದ ಕಲ್ಲುರ್ಟಿ, ಸತ್ಯ ಜ್ಯಾವತೆ, ಕಲ್ಲುರ್ಟಿ – ಕಲ್ಕುಡ, ಕುಪ್ಪೆ ಪಂಜುರ್ಲಿ, ವರ್ಣಾರ ಪಂಜುರ್ಲಿ, ಮಲರಾಯ ದೈವಗಳ ನೇಮ ನಡೆಯಿತು. ಏ. 11 ರ ಬೆಳಗ್ಗೆ ಧರ್ಮದೈವದ ರುದ್ರಚಾಮುಂಡಿ, ಗುಳಿಗ, ಅಂಗಾರ ಬಾಕುಡ ನೇಮೋತ್ಸವ ನಡೆಯಿತು. ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು.










