ಕಲ್ಲುಗುಂಡಿ ಸುನ್ನೀ ಸೆಂಟರ್ ವತಿಯಿಂದ ಸಾಮೂಹಿಕ ಸುನ್ನತ್ ಕಾರ್ಯಕ್ರಮ ಹಾಗೂ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ

0


ಸುನ್ನೀ ಸೆಂಟರ್ ಕಲ್ಲುಗುಂಡಿ ಯಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್, ಸುನ್ನೀ ಯುವಜನ ಸಂಘ(SჄS), ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (SSF), ಕಲ್ಲುಗುಂಡಿ ಯೂನಿಟ್ ಸಂಯುಕ್ತವಾಗಿ ನಡೆಸಿದ ಸಾಮೂಹಿಕ ಸುನ್ನತ್ ಕಾರ್ಯಕ್ರಮ ಹಾಗೂ ಹಜ್ ಯಾತ್ರೆ ಕೈಗೊಳ್ಳಲಿರುವ ಹಜ್ಜಾಜಿಗಳಿಗೆ ಬೀಳ್ಕೊಡುಗೆ ಸಮಾರಂಭ ಎ.13ರಂದು ನಡೆಯಿತು.

ಕಾರ್ಯಕ್ರಮದಲ್ಲಿ ಅಲ್-ಮದೀನಾ ಪಾಲಿಕ್ಲೀನಿಕ್ ಮಂಜನಾಡಿ ಇದರ ಮ್ಯಾನೇಜಿಂಗ್ ಡೈರೆಕ್ಟರ್ ಡಾ.ಮುಹಮ್ಮದ್ ಫಯಾಝ್ ರವರ ನೇತೃತ್ವದ ವೈದ್ಯರ ತಂಡವು ಸುನ್ನತ್ ಕಾರ್ಯಕ್ಕೆ ನೇತೃತ್ವ ನೀಡಿದರು. ಎ.ಎಂ.ಫೈಝಲ್ ಝುಹ್‌ರಿ ಯವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅಬ್ದುಲ್ ಜಲೀಲ್ ಸಖಾಫಿ ಕೊಂಡಂಗೇರಿ ಉಧ್ಘಾಟಿಸಿದರು. ಹಜ್ ಯಾತ್ರೆ ಹೊರಡಲು ಉದ್ದೇಶಿಸಿದ ಯೂನಿಟ್ ವ್ಯಾಪ್ತಿಯ ಉಮರಾ ನಾಯಕರೂ, ಯುವ ಉದ್ಯಮಿಯೂ ಆದ ಅಶ್ರಫ್ ಹೆಚ್.ಎ. ಬಾಲೆಂಬಿ ಹಾಗೂ ಅವರ ಮಗ ಅಫ್ವಾನ್ ರವರಿಗೆ ಸುನ್ನೀ ಸೆಂಟರ್ ಕಲ್ಲುಗುಂಡಿ ವತಿಯಿಂದ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಪೂರ್ವಕ ಬೀಳ್ಕೊಡುಗೆ ನೀಡಲಾಯಿತು.


ಬೆಳಿಗ್ಗೆ 8 ಗಂಟೆಗೆ ಆರಂಭವಾದ ಕಾರ್ಯಕ್ರಮದಲ್ಲಿ ವಿವಿಧ ಧಾರ್ಮಿಕ, ಸಾಮಾಜಿಕ ನಾಯಕರು ಅತಿಥಿಗಳಾಗಿ ಭಾಗವಹಿಸಿ ಶುಭನುಡಿಗಳ ಮೂಲಕ ಆಶೀರ್ವದಿಸಿದರು. ಕಾರ್ಯಕ್ರಮದಲ್ಲಿ KMJ, SჄS, SSF ಯೂನಿಟ್ ಅಧ್ಯಕ್ಷರುಗಳಾದ ಹಂಝ ಟಿ.ಎ ಹಾಗೂ ಆಶಿಕ್ ಕೆ.ಹೆಚ್ ರವರ ನೇತೃತ್ವದಲ್ಲಿ ಕಾರ್ಯದರ್ಶಿ ಅಝೀಝ್ ಸಂಪಾಜೆ, SჄS ಕೋಶಾಧಿಕಾರಿ ಜಲೀಲ್ ಕಲ್ಲುಗುಂಡಿ, ಎಸ್ಸೆಸ್ಸಫ್ ಕೋಶಾಧಿಕಾರಿ ಹಸೈನ್ ಚಟ್ಟೆಕಲ್ಲು, ಎಸ್ಸೆಸ್ಸಫ್ ಮಾಜಿ ಅಧ್ಯಕ್ಷರಾದ ಅಲೀ ಚಟ್ಟೆಕಲ್ಲು ಸಹಿತವಿರುವ ಕಾರ್ಯಕರ್ತರು ಜವಾಬ್ದಾರಿ ವಹಿಸಿಕೊಂಡು ಅಚ್ಚುಕಟ್ಟಾಗಿ ನಡೆಸಲು ಸಹಕರಿಸಿದರು. ಸಮಾರೋಪ ಸಮಾರಂಭದಲ್ಲಿ ಅಲ್-ಮದೀನಾ ಪಾಲಿಕ್ಲೀನಿಕ್ ನ ಮ್ಯಾನೇಜಿಂಗ್ ಡೈರೆಕ್ಟರ್ ಡಾ.ಮುಹಮ್ಮದ್ ಫಯಾಝ್ ಹಾಗೂ ಅವರ ತಂದೆಯವರು ಶುಭನುಡಿಗಳನ್ನರ್ಪಿಸಿದರು.

ಮುಸ್ಲಿಂ ಜಮಾಅತ್ ನಿಕಟ ಪೂರ್ವ ಪ್ರಧಾನ ಕಾರ್ಯದರ್ಶಿ ಸೈದಲವಿ ಕೊಯನಾಡು ಸ್ವಾಗತಿಸಿ, ಎಸ್ಸೆಸ್ಸಫ್ ಪ್ರಧಾನ ಕಾರ್ಯದರ್ಶಿ ಜಾಸಿಂ ಕೊಯನಾಡು ವಂದಿಸಿದರು. SჄS ಪ್ರಧಾನ ಕಾರ್ಯದರ್ಶಿ ಅಶ್ರಫ್ ಚಡಾವು ಕಾರ್ಯಕ್ರಮ ವನ್ನು ನಿರೂಪಿಸಿದರು.