ಸುಳ್ಯ ಬಂಟರ ಭವನದ ಬಳಿ ರಕ್ಷಣಾಗೋಡೆ ನಿರ್ಮಾಣಕ್ಕೆ ಶಾಸಕರಿಂದ ಗುದ್ದಲಿಪೂಜೆ

0

ಸುಳ್ಯ ಕೇರ್ಪಳ ಬಂಟರ ಭವನದ ಬಳಿ ರಕ್ಷಣಾಗೋಡೆ ನಿರ್ಮಾಣಕ್ಕೆ ಗುದ್ದಲಿಪೂಜೆ ಎ.14ರಂದು ನಡೆಯಿತು.

ಶಾಸಕರ ಅಭಿವೃದ್ಧಿ ಅನುದಾನದಲ್ಲಿ ರೂ.5 ಲಕ್ಷ ವೆಚ್ಚದಲ್ಲಿ ರಕ್ಷಣಾಗೋಡೆ ನಿರ್ಮಾಣವಾಗಲಿದ್ದು, ಶಾಸಕಿ ಭಾಗೀರಥಿ ಮುರುಳ್ಯ ಗುದ್ದಲಿಪೂಜೆ ನೆರವೇರಿಸಿದರು.

ನಿವೃತ್ತ ಶಿಕ್ಷಕಿ ಹಿರಿಯರಾದ ಕಮಲಾಕ್ಷಿ ಶೆಟ್ಟಿಯವರು ದೀಪ ಬೆಳಗಿದರು.

ಈ ಸಂದರ್ಭದಲ್ಲಿ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಎ. ನೀರಬಿದಿರೆ, ಉಪಾಧ್ಯಕ್ಷ ಬುದ್ದ ನಾಯ್ಕ್, ಸ್ಥಾಯಿ‌ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್, ಸದಸ್ಯ ವಿನಯ ಕುಮಾರ್ ಕಂದಡ್ಕ, ಬಂಟರ ಸಂಘದ ಅಧ್ಯಕ್ಷ ಎನ್.ಜಯಪ್ರಕಾಶ್ ರೈ, ಪ್ರಧಾನ ಕಾರ್ಯದರ್ಶಿ ತೋಟ ಸುಭಾಶ್ಚಂದ್ರ ರೈ, ಕೋಶಾಧಿಕಾರಿ ಗಂಗಾಧರ ರೈ ಸೋಣಂಗೇರಿ, ಇಂದಿರಾ ರಾಜಶೇಖರ ರೈ, ತಾ.ಪಂ. ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ, ವೆಂಕಟ್ ವಳಲಂಬೆ, ಕುಸುಮಾಧರ ಎ.ಟಿ. ನಾರಾಯಣ ಶಾಂತಿನಗರ, ಹರೀಶ್ ರೈ ಉಬರಡ್ಕ, ಸುಬೋಧ್ ಶೆಟ್ಟಿ ಮೇನಾಲ, ದಾಮೋದರ ಮಂಚಿ, ಸುನಿಲ್‌ಕೇರ್ಪಳ, ಕುಸುಮಾಧರ ಶೆಟ್ಟಿ ‌ಬೂಡು, ಬಂಟರ ಸಂಘ ಪದಾಧಿಕಾರಿಗಳು ಇದ್ದರು.

ಬೂಡು ರಾಧಾಕೃಷ್ಣ ರೈ ಕಾರ್ಯಕ್ರಮ ‌ನಿರ್ವಹಿಸಿದರು.