ಚಾಲಕನ ಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

ಕಲ್ಲುಗುಂಡಿ ಪೊಲೀಸ್ ಔಟ್ ಪೋಸ್ಟ್ ಬಳಿ ಏ 23 ರಂದು ತಡರಾತ್ರಿ ಸುಮಾರು ಮೂರು ಗಂಟೆಗೆ ಟ್ಯಾಂಕರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಬರೆಗೆ ಗುದ್ದಿದ್ದು ಘಟನೆಯಿಂದ ಲಾರಿ ಚಾಲಕನ ಕಾಲಿಗೆ ಗಾಯವಾಗಿ ಸುಳ್ಯ ಆಸ್ಪತ್ರೆಗೆ ದಾಖಲಾದ ಘಟನೆ ವರದಿಯಾಗಿದೆ.

ಮಂಗಳೂರು ನಿಂದ ಮೈಸೂರು ಕಡೆಗೆ ಡಾಂಬರ್ ಕೊಂಡೊಯ್ದು ಅಲ್ಲಿ ಕಾಲಿ ಮಾಡಿ ಮರಳಿ ಬರುತ್ತಿದ್ದ ವೇಳೆ ಕಲ್ಲುಗುಂಡಿ ಪೊಲೀಸ್ ಔಟ್ ಪೋಸ್ಟ್ ಬಳಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿಯು ರಸ್ತೆ ಬದಿಯ ಬರೆಗೆ ಡಿಕ್ಕಿಯಾಗಿದೆ.








ಈ ಸಂದರ್ಭದಲ್ಲಿ ಚಾಲಕ ತನ್ನ ಸೀಟಿನಲ್ಲಿ ಸಿಲುಕಿ ಹಾಕಿ ಕ್ಕೊಂಡಿದ್ದು ಸ್ಥಳೀಯರು ಅವರನ್ನು ಹೊರ ತೆಗೆಯಲು ಸುಮಾರು ಅರ್ಧ ಘಂಟೆ ಶ್ರಮಿಸಿ ಅಂತಿಮವಾಗಿ ಅವರನ್ನು ಅಲ್ಲಿಂದ ರಕ್ಷಣೆ ಮಾಡಿ ಆಂಬುಲೆನ್ಸ್ ನಲ್ಲಿ ಸುಳ್ಯ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.
ಗಾಯ ಗೊಂಡ ಲಾರಿ ಚಾಲಕ ಮೂಲತಹ ಮಂಗಳೂರಿನವರು ಎಂದು ತಿಳಿದು ಬಂದಿದೆ.










